ದಿಲ್ಲಿ ವಿವಿ ಮೊಗಲ್ ಗಾರ್ಡನ್ ಹೆಸರು ಬದಲಾವಣೆ

Prasthutha|

ನವದೆಹಲಿ: ದಿಲ್ಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸಿನ ಮೊಗಲ್ ಗಾರ್ಡನ್ ಹೆಸರನ್ನು ಗೌತಮ ಬುದ್ಧ ಸೆಂಟಿನರಿ ಗಾರ್ಡನ್ ಎಂದು ಸದ್ದಿಲ್ಲದೆ ಹೆಸರು ಬದಲಾಯಿಸಲಾಗಿದೆ.

- Advertisement -


ಜನವರಿ 27ರಂದು ದಿಲ್ಲಿ ವಿವಿಯು ಹೆಸರು ಬದಲಾಯಿಸಿದ ಬಳಿಕ ಆ ಉದ್ಯಾನವು ಮೊಗಲ್ ವಿನ್ಯಾಸದಲ್ಲಿ ಇಲ್ಲ ಎಂದು ಹೇಳಿದೆ.
ಇದಕ್ಕೂ ಮೊದಲು ರಾಷ್ಟ್ರಪತಿ ಭವನದಲ್ಲಿರುವ ಮೊಗಲ್ ಗಾರ್ಡನ್ ಹೆಸರನ್ನು ಅಮೃತ್ ಉದ್ಯಾನ್ ಎಂದು ಬದಲಾಯಿಸಲಾಗಿತ್ತು.
ಉದ್ಯಾನ ಸಮಿತಿಯ ಜೊತೆಗೆ ಹೆಸರು ಬದಲಾಯಿಸಲಾಗಿದೆ, ಎರಡೂ ಕಡೆ ಒಟ್ಟಿಗೆ ಆದುದು ಕಾಕತಾಳೀಯ ಎಂದು ವಿವಿಯ ಅಧಿಕೃತರು ಹೇಳಿದ್ದಾರೆ.


ವಿವಿಯ ಮೊಗಲ್ ಗಾರ್ಡನ್ ನಡುವೆ 15 ವರ್ಷಗಳಿಂದ ಗೌತಮ ಬುದ್ಧರ ಮೂರ್ತಿ ಇದೆ. ಉದ್ಯಾನಕ್ಕೆ ಆ ಹೆಸರು ಇಡಲು ಅದೂ ಕಾರಣ ಎಂದು ರಿಜಿಸ್ಟ್ರಾರ್ ವಿಕಾಸ್ ಗುಪ್ತ ತಿಳಿಸಿದ್ದಾರೆ.
ಮೊಗಲ್ ಶೈಲಿಯಲ್ಲಿ ಕಾಲುವೆ ಮತ್ತು ಕೊಳಗಳು ಇರುತ್ತವೆ. ಅದು ಪರ್ಶಿಯನ್ ಶೈಲಿಯೂ ಆಗಿದೆ. ಮರಿ ನೀರ್ಬೀಳು (ಜಲಪಾತ), ಕಾರಂಜಿಗಳೂ ಇರುತ್ತವೆ. ಚರಂಡಿಗಳನ್ನು ನೀಲಿ ಹಾಸು ಹಂಚು ಬಳಸಿ ಆಮೇಲೆ ಕಟ್ಟಲಾಗಿದೆ. ಹಾಗಾಗಿ ಈ ಉದ್ಯಾನ ಮೊಗಲ್ ಪಾಣಿಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ ನಲ್ಲಿ ನಡೆಯುವ ಪುಷ್ಪ ಪ್ರದರ್ಶನಕ್ಕೆ ಹೆಸರು ಬದಲಾವಣೆ ಮುನ್ನುಡಿಯಾಗಿದೆ ಎನ್ನಲಾಗಿದೆ.

Join Whatsapp