ಲೂಡೋ ಗೇಮ್ ವೇಳೆ ಜಗಳ: ಕೊಲೆಯಲ್ಲಿ ಅಂತ್ಯ !

Prasthutha|

ಕಲಬುರಗಿ: ಲೂಡೋ ಗೇಮ್ ವಿಚಾರಕ್ಕೆ ಸಂಬಂಧಿಸಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಕಂಡಿದೆ. ಆನ್ಲೈಾನ್ ಲೂಡೋ ಗೇಮ್’ಗೆ ಸಂಬಂಧಿಸಿದಂತೆ ಆರಂಭಗೊಂಡ ಜಗಳದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯ ಎದೆಗೆ ಚಾಕು ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಶಾಮರಾಯ ಪರೀಟ್ (16) ಎಂದು ಗುರುತಿಸಲಾಗಿದೆ.

- Advertisement -

ಕಳೆದ ಒಂದು ತಿಂಗಳ ಹಿಂದೆ ಲೂಡೋ ಗೇಮ್ ವಿಚಾರವಾಗಿ ಸಚಿನ್ ಕಿರಸಾವಳಗಿ (22) ಎಂಬಾತನ ಜೊತೆ ಪರೀಟ್ ಕಿರಿಕ್ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಕಳೆದ ರಾತ್ರಿ ಮತ್ತೆ ಇಬ್ಬರ ಮಧ್ಯೆ ಮತ್ತೆ ವಾಗ್ವಾದ ಶುರುವಾಗಿದೆ. ಈ ವೇಳೆ ಮದ್ಯ ಪ್ರವೇಶಿಸಿದ್ದ ಪರೀಟ್ ಸಹೋದರ ಧರ್ಮರಾಜ್ ಇಬ್ಬರನ್ನು ಸಮಾಧಾನಪಡಿಸಿ ಕಳುಹಿಸಿದ್ದಾನೆ. ಆದರೆ ಬಳಿಕ ಸ್ಪಲ್ಪ ಸಮಯದಲ್ಲಿ ಚಾಕು ಸಮೇತ ಆಗಮಿಸಿದ ಸಚಿನ್, ಶಾಮರಾಯ ಪರೀಟ್ ಎದೆಗೆ ಇರಿದಿದ್ದಾನೆ. ಇದೇ ವೇಳೆ ತೀವ್ರ ರಕ್ತಸ್ರಾವದಿಂದ ನರಳಾಡಿ ಶಾಮರಾಯ ಸಾವನ್ನಪ್ಪಿದ್ದಾನೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Join Whatsapp