ಭಾರತೀಯ ಫುಟ್ಬಾಲ್‌ ಫೆಡರೇಶನ್‌ ಮೇಲಿನ ಅಮಾನತು ತೆರವುಗೊಳಿಸಿದ ಫಿಫಾ

Prasthutha|

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲೆ ವಿಧಿಸಲಾಗಿದ್ದ ನಿಷೇಧ ಆದೇಶವನ್ನು ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ (ಫಿಫಾ) ಹಿಂಪಡೆದಿದೆ.  

- Advertisement -

ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯ ಅಧಿಕಾರವನ್ನು ವಹಿಸಿಕೊಳ್ಳಲು ನೇಮಿಸಲಾಗಿದ್ದ ನಿರ್ವಾಹಕರ ಸಮಿತಿಯನ್ನು ರದ್ದುಗೊಳಿಸಲಾದ ಬೆನ್ನಲ್ಲೇ ಮತ್ತು ಎಐಎಫ್‌ಎಫ್ ಆಡಳಿತವು ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದಿದೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಫಿಫಾ ಕೌನ್ಸಿಲ್ ಬ್ಯೂರೋ ಎಐಎಫ್‌ಎಫ್ ಮೇಲಿನ ನಿಷೇಧ ತೆರವುಗೊಳಿಸುವ ನಿರ್ಧಾರವನ್ನು ಘೋಷಿಸಿದೆ.

ಎಐಎಫ್‌ಎಫ್‌ ಮೇಲಿನ ಅಮಾನತು ತೆರವುಗೊಳಿಸಿದ ಪರಿಣಾಮ ಅಕ್ಟೋಬರ್​ 11ರಿಂದ 30ರವರೆಗೆ ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ U-17 ಮಹಿಳಾ ವಿಶ್ವಕಪ್ 2022 ಟೂರ್ನಿಯು ನಿಗದಿಯಂತೆ ನಡೆಯಲಿದೆ. ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವ ಮತ್ತು ಫಿಫಾದ ನಿಯಮಗಳನ್ನು ನಿಯಮಿತವಾಗಿ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ, ಫಿಫಾ, ಆಗಸ್ಟ್‌ 16ರಂದು ಎಐಎಫ್‌ಎಫ್ ಅನ್ನು ಅಮಾನತು ಮಾಡಿತ್ತು.

Join Whatsapp