ಝೀಕಾ ಸೋಂಕಿನ ಭೀತಿ ಹಿನ್ನೆಲೆ: ಪ್ರಯಾಣಿಕರ ಕಟ್ಟುನಿಟ್ಟಿನ ತಪಾಸಣೆ

Prasthutha|

ಬೆಂಗಳೂರು: ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಾಗೂ ಝೀಕಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ತಪಾಸಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

- Advertisement -


ರಾಜ್ಯ ಗೃಹ ಇಲಾಖೆ ನಿರ್ದೇಶನದಂತೆ ಗಡಿ ಭಾಗಗಳಲ್ಲಿ ಪ್ರಯಾಣಿಸುವವರ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಭಗವಾನ್ ಸೋನಾವನೆ ತಿಳಿಸಿದ್ದಾರೆ. ಜಿಲ್ಲೆಯನ್ನು ಸಂಪರ್ಕಿಸುವ 16 ಕಡೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಗಡಿ ಭಾಗಗಳಲ್ಲಿ ಸಂಚರಿಸುವವರು ಕೋವಿಡ್ ಲಸಿಕೆ ಪಡೆದ ದಾಖಲೆ ಅಥವಾ ಆರ್ ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹಾಜರು ಪಡಿಸಬೇಕು. ಇಲ್ಲವೇ ಗಂಟಲು ದ್ರವ ಪರೀಕ್ಷೆ ಕಡ್ಡಾಯವಾಗಿದೆ ಎಂದು ಅವರು ಹೇಳಿದ್ದಾರೆ.


ಎಸ್ಐ ನೇತೃತ್ವದಲ್ಲಿ ಪ್ರತಿ ಠಾಣೆಯಲ್ಲಿ 4 ರಿಂದ 5 ಪೊಲೀಸ್ ಸಿಬ್ಬಂದಿ ಮೂರು ಪಾಳಿಯಲ್ಲಿ, ಆರೋಗ್ಯ ಸಿಬ್ಬಂದಿ ಸಹಕಾರದೊಂದಿಗೆ ತಪಾಸಣೆ ನಡೆಸಲಿದ್ದಾರೆ. ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ ಆರಂಭವಾದಗಲೂ ಇದೇ ರೀತಿಯ ಕ್ರಮವನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಅನುಸರಿಸಲಾಗುವುದು ಎಂದು ಅವರು ಹೇಳಿದರು.

Join Whatsapp