ಭಯವೇ ಫ್ಯಾಶಿಸ್ಟ್ ರಾಜಕೀಯದ ಮೂಲ ಅಸ್ತ್ರ: ಮೂವಾಟ್ಟುಪ್ಪುಝ ಅಶ್ರಫ್ ಮೌಲವಿ

Prasthutha|

ಉಪ್ಪಳ: ನಾಡಿನಾದ್ಯಂತ ಅರಾಜಕತೆ ಸೃಷ್ಟಿಸಿ, ಬಹಿರಂಗವಾಗಿಯೇ ತನಿಖಾ ಸಂಸ್ಥಗಳನ್ನೂ; ನ್ಯಾಯಾಂಗವನ್ನೂ ದುರುಪಯೋಗ ಪಡಿಸಿ ವಿರೋಧದ ಅಲೆಗಳನ್ನು ಮಟ್ಟ ಹಾಕುವ ಫ್ಯಾಶಿಸ್ಟ್ ಆಢಳಿತದ ಮುಂದೆ ತಮ್ಮ ಉಳಿವಿಗಾಗಿ ಜಾಣ ಮೌನ ಪಾಲಿಸುತ್ತಿರುವ ಸೋಕಾಲ್ಡ್ ಜಾತ್ಯತೀತ ಪಕ್ಷಗಳು ಹಾಗೂ ಇತರರ ಭಯವೇ ಫ್ಯಾಶಿಸ್ಟರ ಅಸ್ತ್ರವಾಗಿದೆ ಎಂದು SDPI ಕೇರಳ ರಾಜ್ಯಾಧ್ಯಕ್ಷ ಮೂವಾಟ್ಟುಪ್ಪುಝ ಅಶ್ರಫ್ ಮೌಲವಿ ಹೇಳಿದರು.

- Advertisement -

 ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶವನ್ನು ಉಧ್ಘಾಟಿಸಿ ಅವರು ಮಾತನಾಡುತ್ತಿದ್ದರು. 

    ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರದ ಅಧ್ಯಕ್ಷರಾದ ಅಶ್ರಫ್ ಬಡಾಜೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮತಿ ಚೇರ್ಮಾನ್ ಹಮೀದ್ ಹೊಸಂಗಡಿ, ಪಕ್ಷದ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಪಾಕ್ಯಾರ, ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ ಮಾತನಾಡಿದರು.

- Advertisement -

    ಮಂಜೇಶ್ವರ ಕ್ಷೇತ್ರ ಕಾರ್ಯದರ್ಶಿ ಆರಿಫ್ ಖಾದರ್ ಸ್ವಾಗತಿಸಿ, ಕೋಶಾಧಿಕಾರಿ ಶರೀಫ್ ಪಾವೂರು ವಂದಿಸಿದರು.

Join Whatsapp