ಸಾಕುಪ್ರಾಣಿಗಳಿಗೆ ಕೊಡುವ ಆಂಟಿ ಪಾರಾಸಿಟಿಕ್ ಕೊರೋನಾ ರೋಗಿಗೆ ಕೊಡಬೇಡಿ: ಎಫ್ ಡಿಎ

Prasthutha|

ನ್ಯೂಯಾರ್ಕ್: ಕುದುರೆ, ದನ ಮೊದಲಾದ ಸಾಕುಪ್ರಾಣಿಗಳಿಗೆ ಕೊಡುವ ಆಂಟಿ ಪಾರಾಸಿಟಿಕ್ (ಪರಾವಲಂಬಿ) ಐವೆರ್ ಮೆಕ್ಟಿನ್ ಮದ್ದನ್ನು ವ್ಯಾಪಕವಾಗಿ ಕೊರೋನಾಕ್ಕೆ ಕೊಡುವುದು ಸರಿಯಲ್ಲ ಎಂದು ಅಮೆರಿಕದ ಎಫ್ ಡಿಎ- ಆಹಾರ ಮತ್ತು ಔಷಧಿ ಆಡಳಿತ ನಿರ್ದೇಶನಾಲಯ ಹೇಳಿದೆ.

- Advertisement -


ಐವರ್ ಮೆಕ್ಟಿನ್ ಆಂಟಿ ವೈರಸ್ ಮದ್ದಲ್ಲ. ಇದನ್ನು ಆಂಟಿ ಪಾರಾಸಿಟಿಕ್ ಆಗಿ ಪ್ರಾಣಿಗಳಿಗೆ ಬಳಸುತ್ತಾರೆ. ಕರುಳಿನ, ಜಠರದ, ಓಂಕೋಸೆರ್ಸಿಯಾಸಿಸ್, ಹೇನು, ಚರ್ಮದ ಕೆಲವು ಸ್ಥಿತಿಯಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಎಫ್ ಡಿಎ ತಿಳಿಸಿದೆ.
ಜನರು ಕುದುರೆಗಳೂ ಅಲ್ಲ, ದನಗಳೂ ಅಲ್ಲ, ಕೂಡಲೆ ಈ ಮದ್ದು ನೀಡುವುದನ್ನು ನಿಲ್ಲಿಸಿ ಎಂದು ಎಫ್ ಡಿಎ ಹೇಳಿದೆ. ಮಿಸಿಸಿಪ್ಪಿ ಆರೋಗ್ಯ ಇಲಾಖೆಯು ನಮ್ಮ ಪ್ರಾಂತ್ಯದಲ್ಲಿ ಕೊರೋನಾಕ್ಕೆ ಈ ಮದ್ದನ್ನು ಬಳಸಲಾಗುತ್ತಿದೆ ಎಂದು ಹೇಳಿದ ಮರುದಿನವೇ ಎಫ್ ಡಿಎ ಈ ಸ್ಟಾಪಿಟ್ ಹೇಳಿಕೆ ನೀಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.


ಪ್ರಾಣಿಗಳ ಔಷಧಿಗಳು ದೊಡ್ಡ ದೇಹದ ಪ್ರಾಣಿಗಳಿಗಾಗಿ ತಯಾರಿಸಲಾಗಿರುತ್ತದೆ. ಅದು ಕರಗದಿದ್ದರೆ ಐವೆರ್ ಮೆಕ್ಟಿನ್ ನಂಜು ದದ್ದು, ವಾಕರಿಕೆ, ವಾಂತಿ, ಕೆಳಹೊಟ್ಟೆ ನೋವು, ನರಗಳ ಅಸ್ವಸ್ಥತೆ ಕಾಡಬಹುದು. ಲೋಕ ಆರೋಗ್ಯ ಸಂಸ್ಥೆಯು ಐವರ್ ಮೆಕ್ಟಿನ್ ಕೋವಿಡ್ ರೋಗಿಗಳನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ಮಾರ್ಚ್ ತಿಂಗಳಲ್ಲೇ ಹೇಳಿದೆ.

- Advertisement -


ಯಾವುದೇ ಮದ್ದು ತೆಗೆದುಕೊಳ್ಳುವಾಗ ಅದು ಎಷ್ಟು ಸುರಕ್ಷಿತ ಎನ್ನುವುದು ಮುಖ್ಯವಾಗುತ್ತದೆ. ಐವರ್ ಮೆಕ್ಟಿನನ್ನು ಕೆಲವು ವೈದ್ಯರು ನೀಡಿದ್ದಾರೆ. ಯುಎಸ್ ಅಲ್ಲದೆ ಬ್ರೆಜಿಲ್, ಬೊಲಿವಿಯಾ, ಪೆರು, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಇದನ್ನು ಬಹಳ ಜನ ಸ್ವಯಂ ವೈದ್ಯರಾಗಿ ತೆಗೆದುಕೊಂಡಿದ್ದಾರೆ. ಐವರ್ ಮೆಕ್ಟಿನ್ ಬಗೆಗೆ ಮತ್ತೊಂದಿಷ್ಟು ಸಂಶೋಧನೆ ನಡೆದಿದೆ. ಆದರೆ ಇದರ ಬಳಕೆ ಈಗ ಖಂಡಿತ ಸೂಕ್ತವಲ್ಲ ಎಂದು ಎಫ್ ಡಿಎ ಎಚ್ಚರಿಸಿದೆ.



Join Whatsapp