ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯಾಧ್ಯಕ್ಷರಾಗಿ ಫಝಲುಲ್ಲಾ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ನಂದರಬೆಟ್ಟು

Prasthutha|

ಬೆಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಇದರ ರಾಜ್ಯ ಪ್ರತಿನಿಧಿ ಸಭೆ ಬೆಂಗಳೂರಿನ ಎಸ್. ಕೆ. ಎಫ್ ಸಭಾಂಗಣದಲ್ಲಿ ರವಿವಾರ ನಡೆಯಿತು.

- Advertisement -

ರಾಜ್ಯ ಸಮಿತಿ ಸದಸ್ಯರು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಜಿಲ್ಲಾ ಸಮಿತಿಯ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 2019 ರಿಂದ 2022 ರ ವರೆಗಿನ ವರದಿಯನ್ನು ಮಂಡಿಸಲಾಯಿತು. ಬಳಿಕ ನೂತನ ರಾಜ್ಯ ಸಮಿತಿಗೆ ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ರಾಜ್ಯಾಧ್ಯಕ್ಷರಾಗಿ ಫಝಲುಲ್ಲಾ ಬೆಂಗಳೂರು, ಉಪಾಧ್ಯಕ್ಷರಾಗಿ ಬ್ಯಾಫ್ಟಿಸ್ಟ್ ಡಿಸೋಜಾ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ನಂದರಬೆಟ್ಟು, ಕಾರ್ಯದರ್ಶಿಯಾಗಿ ಶರೀಫ್ ಪಾಂಡೇಶ್ವರ, ನಜೀಬ್ ಮೈಸೂರು, ಕೋಶಾಧಿಕಾರಿಯಾಗಿ ಖಾದರ್ ಫರಂಗಿಪೇಟೆ ಸದಸ್ಯರಾಗಿ ಅಬ್ದುಲ್ ರಹೀಮ್ ಪಟೇಲ್ ಗುಲ್ಬರ್ಗ, ಸಿದ್ದರಾಜು ಬೆಂಗಳೂರು, ಮಿರ್ಝಾ ಬೇಗ್ ಮೈಸೂರು, ಪರಮಾನಂದ ತಲ್ವಾರ್, ಸಯ್ಯದ್ ದಸ್ತಗೀರ್ ಅವರನ್ನು ಆಯ್ಕೆ ಮಾಡಲಾಯಿತು.

- Advertisement -

ಕಾರ್ಮಿಕರ ಮೇಲೆ ನಡೆಯುವ ಶೋಷಣೆ ಮತ್ತು ಅದಕ್ಕಿರುವ ಪರಿಹಾರ ಮಾರ್ಗೋಪಾಯಗಳು ಎಸ್.ಡಿ.ಟಿ.ಯು ಮೇಲಿರುವ ಹೊಣೆಗಾರಿಕೆಯ ಬಗ್ಗೆ ವಿವರಿಸಿ ರಾಜ್ಯ ಪದಾದಿಕಾರಿಗಳನ್ನು ಚುನಾವಣಾ ಮೂಲಕ ಎಸ್.ಡಿ.ಟಿ.ಯು ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಅಝೀಜ್ ಖಾನ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಾರೂಕು ತಮಿಳುನಾಡು ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಕೊಟ್ಟರು.

ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಹೈಕೋರ್ಟ್ ಹಿರಿಯ ನ್ಯಾಯವಾದಿ ಎಸ್. ಬಾಲನ್, ಎಸ್.ಡಿ.ಟಿ.ಯು ಬೆಂಗಳೂರು ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷ ಅಝರ್ ಖಾನ್ ಈ ಸಂದರ್ಭದಲ್ಲಿ ಮಾತನಾಡಿದರು. ನಜೀಬ್ ಮೈಸೂರು ದನ್ಯವಾದಗೈದರು. ಖಾದರ್ ಫರಂಗಿಪೇಟೆ ಸ್ವಾಗತಿಸಿ ನಿರೂಪಿಸಿದರು.

Join Whatsapp