ಇಂದಿನಿಂದ ವಿದೇಶಿ ಯಾತ್ರಾರ್ಥಿಗಳಿಗೆ ಉಮ್ರಾ ನಿರ್ವಹಿಸಲು ಅನುಮತಿ

Prasthutha|

- Advertisement -

ದಮ್ಮಾಮ್ : ವಿದೇಶದಿಂದ ಬಂದ ಯಾತ್ರಾರ್ಥಿಗಳು ಮೂರು ದಿವಸ ಕ್ವಾರಂಟೈನ್ ನಲ್ಲಿ ಕಳೆದ ನಂತರ ಇಂದಿನಿಂದ ಉಮ್ರಾ ನಿರ್ವಹಿಸಲು ಆರಂಭಿಸಲಿದ್ದಾರೆ. ಕೋವಿಡ್ ನಿಂದಾಗಿ ನಿಲ್ಲಿಸಲಾಗಿದ್ದ ಉಮ್ರಾ ಸೇವೆ ಪುನರಾರಂಭಿಸಿದ ನಂತರ ವಿದೇಶ ಯಾತ್ರಾರ್ಥಿಗಳಿಗೆ ಮೊದಲ ಬಾರಿಗೆ ಅನುಮತಿ ಲಭಿಸಿದೆ. ವಿದೇಶದಿಂದ ಬರುವವರಿಗೆ ಮೂರು ದಿವಸದ ಕ್ವಾರಂಟೈನ್ ಕಡ್ಡಾಯವಾಗಿದೆ. ಇದಕ್ಕಾಗಿ ಮಕ್ಕಾದ ಹೋಟೆಲುಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

18 ರಿಂದ 50 ವರ್ಷದೊಳಗೆ ಇರುವ ವಿದೇಶಿ ಯಾತ್ರಾರ್ಥಿಗಳಿಗೆ ಅನುಮತಿ ನೀಡಲಾಗಿದೆ. ಸೌದಿ ಅರೇಬಿಯಾ ಪ್ರವಾಸಕ್ಕೆ 72 ಗಂಟೆಗಳ ಮೊದಲು ಅನುಮೋದಿತ ಲ್ಯಾಬ್ ನಿಂದ ಪಿಸಿಆರ್ ಪರೀಕ್ಷಾ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಯಾತ್ರೆಗೆ ಮೊದಲು ಉಮ್ರಾ ನಿರ್ವಹಿಸಲು, ಮಸ್ಜಿದುಲ್ ಹರಂ ಮತ್ತು ರೌಲಾ ಶರೀಫಿನಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವಾದಿ ಮುಹಮ್ಮದರ ರೌಲಾ ಶರೀಫಿಗೆ ಭೇಟಿ ನೀಡಲು ಇಹ್ತಿಮಾರನಾ ಆಪ್ ಮೂಲಕ ಮುಂಚಿತವಾಗಿ ಕಾಯ್ದಿರಿಸಬೇಕಾಗುತ್ತದೆ. ಪಾಕ್ ಮತ್ತು ಇಂಡೋನೇಶ್ಯಾ ಯಾತ್ರಾರ್ಥಿಗಳು ಈಗಾಗಲೇ ಆಗಮಿಸಿದ್ದಾರೆ.

Join Whatsapp