ಮೆಲ್ಕಾರ್ ಮಹಿಳಾ ಕಾಲೇಜಿನ ಫಾತಿಮಾ ಸಫಾ ರಾಷ್ಟ್ರ ಮಟ್ಟದ ಇನ್ಸ್ಪೆರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆ

Prasthutha|

ಬಂಟ್ವಾಳ : ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮಾ ಸಫಾ ರಾಷ್ಟ್ರ ಮಟ್ಟದ ಇನ್ಸ್ಪೆರ್ ಅವಾರ್ಡ್ ಸ್ಪರ್ಧೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

- Advertisement -


ಅಕ್ಟೋಬರ್ 6 ರಿಂದ 13 ರವರೆಗೆ ನವದೆಹಲಿಯಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ.


ಇವರು ಬಿ.ಸಿ.ರೋಡ್ ಸಮೀಪದ ಪರ್ಲಿಯ ನಿವಾಸಿ ಇಸ್ಮಾಯಿಲ್ ಬಿ.ಎಮ್. ಮತ್ತು ಸೆಲೀಕ ದಂಪತಿ ಪುತ್ರಿಯಾಗಿದ್ದು, ಕೊಡಂಗೆ ಸರಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು, ಶಿಕ್ಷಕಿ ಸುಮನಾ ಅವರಿಂದ ತರಬೇತು ಪಡೆದಿದ್ದಾಳೆ.