ನಮ್ಮ ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಬಿತ್ತು 500 ರೂ. ದಂಡ

Prasthutha|

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಗೋಬಿ ಮಂಚೂರಿಯನ್ನು ಸೇವಿಸಿದ ವ್ಯಕ್ತಿಗೆ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದಾರೆ.

- Advertisement -


ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ.


ವ್ಯಕ್ತಿ ಮೆಟ್ರೋ ಪ್ರಯಾಣದ ವೇಳೆ ಗೋಬಿ ಸೇವಿಸುತ್ತಿರುವುದನ್ನು ಸ್ನೇಹಿತರು ವೀಡಿಯೋ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿದೆ. ಬಳಿಕ ಈ ವಿಚಾರ ಬಿಎಂಆರ್ ಸಿಎಲ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಮೆಟ್ರೋ ನಿಗಮ ವ್ಯಕ್ತಿಯಿಂದ ದಂಡ ವಸೂಲಿ ಮಾಡಿದೆ.

Join Whatsapp