ಮಂಗಳೂರು: ಹಸು ಕಟ್ಟಿ ಹಾಕುವ ವಿಚಾರ ವಿಕೋಪಕ್ಕೆ | ಮಗನನ್ನ ಪೆಟ್ರೋಲ್ ಸುರಿದು ಕೊಂದ ತಂದೆ!

Prasthutha|

ಮಂಗಳೂರು: ಸಾಕು ದನಗಳನ್ನು ಹೊರಗಡೆ ಕಟ್ಟಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮಗ ಸಾವನ್ನಪ್ಪಿದ್ದಾರೆ.

- Advertisement -

ವಾರದ ಹಿಂದೆ ನಗರದ ಜಪ್ಪಿನಮೊಗರಿನ ಕೊಪ್ಪರಿಗೆಗುತ್ತು ಎಂಬಲ್ಲಿ ಸಾಕುದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ಬಗ್ಗೆ ಮೃತ ಸ್ವಾಮೀತ್ ಶೆಟ್ಟಿ (25) ಹಾಗೂ ಆತನ ತಂದೆ ವಿಶ್ವನಾಥ ಶೆಟ್ಟಿ (52)ಅವರ ನಡುವೆ ಜಗಳವಾಗಿ ತಂದೆ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರು. ಬಳಿಕ ಮನೆಯ ಒಳಗಡೆ ಬಂದು ಬಾಗಿಲು ಮುಚ್ಚಿ, ಚಿಲಕ ಹಾಕಿ ಪ್ಲಾಸ್ಟಿಕ್ ಕ್ಯಾನ್ ನಲ್ಲಿದ್ದ ಪೆಟ್ರೊಲ್ ಅನ್ನು ಮಗನ ಮೈ ಮೇಲೆ ಸುರಿದು ಅಲ್ಲಿಯೇ ಇದ್ದ ಸಿಗರ್ ಲೈಟರಿನಿಂದ ಬೆಂಕಿ ಹಚ್ಚಿದ್ದರು. ಗಂಭೀರ ಸ್ಥಿತಿಯಲ್ಲಿ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ಚಿಕಿತ್ಸೆ ಫಲಿಸದೇ ಸ್ವಾಮೀತ್ ಶೆಟ್ಟಿ ನಗರದ ಎಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಆರೋಪಿ ವಿಶ್ವನಾಥ್ ಶೆಟ್ಟಿಯನ್ನ ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.



Join Whatsapp