ನವದೆಹಲಿ: ತಂದೆಯೋರ್ವ ಸುಪಾರಿ ನೀಡಿ ತನ್ನ 29 ವರ್ಷದ ಮಗನನ್ನೇ ಹತ್ಯೆ ಮಾಡಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದು, ಕ್ರೂರ ತಂದೆಯಾದ ರಂಗ್ ಲಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ಪ ನೀಡಿದ ಸುಪಾರಿಯಿಂದಲೇ ಕೊಲೆಗೀಡಾದ ಗೌರವ್ ಸಿಂಘಾಲ್ ದೆಹಲಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಫೆಬ್ರವರಿ 7ರಂದು 15 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಕೊಲೆಯ ನಂತರ ತಂದೆ ರಂಗ್ ಲಾಲ್ ದೆಹಲಿಯಿಂದ ಜೈಪುರಕ್ಕೆ ಓಡಿ ಹೋಗಿದ್ದ. ಮಗನ ಹತ್ಯೆಗೆ ಈತ ಕಳೆದ 4 ತಿಂಗಳಿನಿಂದಲೂ ಯೋಜನೆ ರೂಪಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದಕ್ಷಿಣ ದೆಹಲಿಯ ದೆವ್ಲಿ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿ ಇರುವ ನಿವಾಸದಲ್ಲಿ ಗೌರವ್ ಸಿಂಘಾಲ್ ಹತ್ಯೆಯಾಗಿತ್ತು. ಮುಖ ಹಾಗೂ ಎದೆಗೆ 15 ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ತಂದೆ ರಂಗ್ ಲಾಲ್‌ಗೆ ಗೌರವ್ ಸಿಂಘಾಲ್ ಹಾಗೂ ತನ್ನ ಪತ್ನಿ ಜೊತೆ ಸಂಬಂಧ ಹಳಸಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನಿಗಾಗಿ ಬಲೆ ಬೀಸಿದ ಪೊಲೀಸರಿಗೆ ಕೊಲೆ ಆರೋಪಿ ತಂದೆಯೇ ಎಂಬುದು ಗೊತ್ತಾಗಿದೆ.
ಮಗನ ಐಷಾರಾಮಿ ಜೀವನ ಶೈಲಿಯಿಂದಾಗಿ ರಂಗ್ ಲಾಲ್ ಅಸಮಾಧಾನಗೊಂಡಿದ್ದ, ಆದರೆ ಮಗನ ಬಗ್ಗೆ ಅಸಮಾಧಾನಗೊಂಡಾಗಲೆಲ್ಲಾ, ರಂಗ್‌ಲಾಲ್ ಪತ್ನಿ ಮಗನನ್ನು ಬೆಂಬಲಿಸುತ್ತಿದ್ದಳು. ಇಂದು ರಂಗ್‌ಲಾಲ್‌ನನ್ನು ಮತ್ತಷ್ಟು ಕುಪಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸ್ವಂತ ಮಗನನ್ನೇ ಕೊಲ್ಲಿಸುವ ಪ್ಲಾನ್ ಮಾಡಿದ ಆತ ಅದಕ್ಕಾಗಿ ಮೂವರನ್ನು ನಿಯೋಜಿಸಿ ಅವರಿಗೆ 75 ಸಾವಿರ ರೂಪಾಯಿ ಸುಪಾರಿ ನೀಡಿದ್ದ.
ಪ್ರಕರಣದಲ್ಲಿ ಭಾಗಿಯಾದ ಇತರ ನಾಲ್ವರು ತಲೆಮರೆಸಿಕೊಂಡಿದ್ದಾರೆ.