ಬೈಕಲ್ಲಿದ್ದ ಪಟಾಕಿ ಸಿಡಿದು ತಂದೆ ಮಗ ಸ್ಥಳದಲ್ಲೇ ಸಾವು

Prasthutha|

ಪುದುಚೇರಿ : ಬೈಕ್ ನಲ್ಲಿ ಪಟಾಕಿಗಳನ್ನು ಗೋಣಿಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಅವು ದಿಢೀರ್ ಹೊತ್ತಿ ಉರಿದ ಪರಿಣಾಮ ಬೈಕ್ನಲ್ಲಿದ್ದ ತಂದೆ ಮತ್ತು 7 ವರ್ಷದ ಮಗ ಸಾವನ್ನಪ್ಪಿದ್ದಾರೆ. ಈ ಹೃದಯವಿದ್ರಾವಕ ಘಟನೆ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ನಡೆದಿದೆ.

- Advertisement -

ಪುದುಚೇರಿಯ ಅರಿಯಂಕುಪ್ಪಂ ಪಟ್ಟಣದ ನಿವಾಸಿ ಕಲೈನೇಸನ್ (32) ಹಾಗೂ ಆತನ 7 ವರ್ಷದ ಮಗ ಮೃತರು. ಕಲೈನೇಸನ್ ಮರಕ್ಕನಂನಿಂದ ಎರಡು ಗೋಣಿಚೀಲಗಳಲ್ಲಿ ಪಟಾಕಿಗಳನ್ನು ತೆಗೆದುಕೊಂಡು ತಮ್ಮ 7 ವರ್ಷದ ಮಗನೊಂದಿಗೆ ಪುದುಚೇರಿಗೆ ತೆರಳುತ್ತಿದ್ದರು.

ಆಗ ದ್ದಕ್ಕಿದ್ದಂತೆ ಗೋಣಿಚೀಲದಲ್ಲಿದ್ದ ಪಟಾಕಿ ಸಿಡಿದಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಲಾರಿ ಮತ್ತಿತರ ವಾಹನಗಳು ಜಖಂಗೊಂಡಿವೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತ್ತಿಬ್ಬರು ಗಾಯಗೊಂಡಿದ್ದಾರೆ. ಘಟನೆಯಿಂದ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, 2 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ವಿಲ್ಲುಪುರಂ ಜಿಲ್ಲಾ ಮತ್ತು ಪುದುಚೇರಿ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



Join Whatsapp