ಭಾರತದ ಪ್ರದೇಶದಲ್ಲಿ ಚೀನಾವು ಅಕ್ರಮ ಪ್ರವೇಶಿಸಿ ಗ್ರಾಮವನ್ನೇ ನಿರ್ಮಿಸಿರುವುದನ್ನು ಉಲ್ಲೇಖಿಸಿದ US ರಕ್ಷಣಾ ವರದಿ

Prasthutha|

ಅರುಣಾಚಲ ಪ್ರದೇಶ : ಭಾರತದ ಅರುಣಾಚಲ ಪ್ರದೇಶದಲ್ಲಿ ಚೀನಾ ದೇಶವು ನೂರು ಮನೆಗಳುಳ್ಳ ಗ್ರಾಮ ನಿರ್ಮಾಣ ಮಾಡಿರುವುದನ್ನು ಅಮೆರಿಕ ರಕ್ಷಣಾ ವಿಭಾಗದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಇದು ದೇಶವು ಇನ್ನೊಂದು ದೇಶದೊಳಗೆ ನುಸುಳಿ ಒಂದು ಗ್ರಾಮವನ್ನೇ ನಿರ್ಮಿಸಲು ತೋರಿಸಿದ ಧೈರ್ಯಕ್ಕೆ ವರದಿ ಆಶ್ಚರ್ಯ ವ್ಯಕ್ತಪಡಿಸಿದೆ. ಆ ಪ್ರದೇಶಗಳಲ್ಲಿ ಲೈನ್ ಆಫ್ ಕಂಟ್ರೋಲ್‌ನಲ್ಲಿ ಉದ್ವಿಗ್ವ ಸ್ಥಿತಿ ಇರುವುದನ್ನು ವರದಿ ತಿಳಿಸಿದೆ.

- Advertisement -


ವರದಿಯ ‘ಚೀನಾ-ಭಾರತ ಗಡಿ ಬಿಕ್ಕಟ್ಟು’ ಎಂಬ ಅಧ್ಯಾಯದಲ್ಲಿ 2020ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು 100 ಮನೆಗಳ ಒಂದು ಹಳ್ಳಿಯನ್ನು ಸ್ವಾಯುತ್ತ ಟಿಬೇಟ್ ಮತ್ತು ಭಾರತದ ಅರುಣಾಚಲ ಪ್ರದೇಶದ ಲೈನ್ ಆಫ್ ಕಂಟ್ರೋಲ್‌ನ ವಿವಾದಿತ ಜಾಗದಲ್ಲಿ ನಿರ್ಮಿಸಿದೆ ಎಂದು ಬರೆಯಲಾಗಿದೆ. ವರದಿಯನ್ನು ಯುಎಸ್ ಕಾಂಗ್ರೆಸ್‌ಗೆ ಸಲ್ಲಿಸಲಾಗಿದೆ.


ಚೀನಾದ ಈ ನಡೆ ಮತ್ತು ಆ ಜಾಗದಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿರುವುದು ಭಾರತೀಯ ಸರ್ಕಾರ ಮತ್ತು ಮಾಧ್ಯಮಗಳನ್ನು ದಿಗ್ಭ್ರಮೆಗೆ ದೂಡಿದೆ ಎಂದು ವರದಿ ಹೇಳಿದೆ. ತ್ಸಾರ್ ಚು ನದಿ ದಂಡೆ ಪ್ರದೇಶದಲ್ಲಿರುವ ಈ ಗ್ರಾಮ ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿಗೆ ಸೇರಿದೆ. ಇದು 1962ರ ಯುದ್ಧಕ್ಕೂ ಮೊದಲಿನಿಂದಲೂ ಭಾರತ-ಚೀನಾ ನಡುವಿನ ವಿವಾದಿತ ಪ್ರದೇಶಗಳಲ್ಲೊಂದಾಗಿದೆ.

- Advertisement -


ಈ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಸೈನ್ಯದ ತುಕಡಿಯನ್ನು ದಶಕಕ್ಕೂ ಮೊದಲೇ ಚೀನಾ ದೇಶವು ನಿಯೋಜಿಸಿತ್ತು. ಆದರೆ 2020 ರಲ್ಲಿ ಭಾರತಕ್ಕೆ ಸೇರಿದ ಪ್ರದೇಶದೊಳಗೆ ರಸ್ತೆ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಗ್ರಾಮವನ್ನೇ ನಿರ್ಮಾಣ ಮಾಡಿದೆ.

Join Whatsapp