ವಿವಾದಾತ್ಮಕ ಕೃಷಿ ಕಾಯ್ದೆ ವಾಪಸ್: ವಿಜಯ ಯಾತ್ರೆಯೊಂದಿಗೆ ಹಿಂದಿರುಗಿದ ರೈತಾಪಿವರ್ಗ

Prasthutha|

ಛಂಡೀಗಢ: ಒಕ್ಕೂಟ ಸರ್ಕಾರ ಜಾರಿಗೆ ತಂದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು ಕಳೆದ 15 ತಿಂಗಳಿನಿಂದ ನಡೆಸುತ್ತಿದ್ದ ಆಂದೋಲನವನ್ನು ಕೊನೆಗೊಳಿಸಿದ ನಂತರ ದೆಹಲಿಯ ಸಿಂಘು, ಟಕ್ರಿ ಮತ್ತು ಗಾಝಿಪುರದಲ್ಲಿ ನೆಲೆಸಿದ್ದ ರೈತರು ಶನಿವಾರ ತಮ್ಮ ಹಳ್ಳಿಗಳಿಗೆ ವಿಜಯ ಯಾತ್ರೆಯ ಮೂಲಕ ಹಿಂದಿರುಗಿದ್ದಾರೆ.

- Advertisement -

ಪ್ರತಿಭಟನಾ ನಿರತ ರೈತರು ಆಂದೋಲನಕ್ಕಾಗಿ ಹಾಕಲಾಗಿದ್ದ ತಾತ್ಕಾಲಿಕ ಟೆಂಟ್ ಅನ್ನು ಕಿತ್ತುಹಾಕಿ ತಮ್ಮ ಮನೆಗಳ ಕಡೆಗೆ ಟ್ರಾಕ್ಟರ್ ಗಳ ಮೂಲಕ ಪ್ರಯಾಣ ಆರಂಭಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ರಾಕೇಶ್ ಟಿಕಾಯತ್, ಪ್ರತಿಭಟನಾ ನಿರತ ರೈತರ ಬೃಹತ್ ಗುಂಪು ಪ್ರತಿಭಟನಾ ಸ್ಥಳದಿಂದ ನಿರ್ಗಮಿಸುತ್ತಿದೆ. ಪೂರ್ತಿ ತಂಡ ಸ್ಥಳವನ್ನು ತೆರವುಗೊಳಿಸಲು ನಾಲ್ಕೈದು ದಿನ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ನಾನು ಡಿಸೆಂಬರ್ 15 ರಂದು ಇಲ್ಲಿಂದ ನಿರ್ಗಮಿಸುವುದಾಗಿ ತಿಳಿಸಿದರು.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp