ನಾಳೆ ರೈತರ ಟ್ರಾಕ್ಟರ್ ಕ್ರಾಂತಿ | ದೆಹಲಿಯತ್ತ 2 ಲಕ್ಷಕ್ಕೂ ಅಧಿಕ ಟ್ರಾಕ್ಟರ್ ಗಳು!

Prasthutha|

ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ, ಜ.26ರ (ನಾಳೆ) ಗಣರಾಜ್ಯೋತ್ಸವದ ಸಂದರ್ಭ ದೆಹಲಿಯಲ್ಲಿ ನಡೆಸಲುದ್ದೇಶಿಸಲಾಗಿರುವ ‘ಟ್ರಾಕ್ಟರ್ ಪರೇಡ್ ಗೆ ಪಂಜಾಬ್ ಮತ್ತು ಹರ್ಯಾಣದಿಂದಲೇ ಸುಮಾರು 1,80,000 ಟ್ರಾಕ್ಟರ್ ಗಳು ಬರಲಿವೆ ಎಂದು ವರದಿಗಳು ತಿಳಿಸಿವೆ.

- Advertisement -

ಈಗಾಗಲೇ ಸಾವಿರಾರು ಟ್ರಾಕ್ಟರ್ ಗಳು ಪಂಜಾಬ್ ಮತ್ತು ಹರ್ಯಾಣಗಳು ಹೆದ್ದಾರಿಗಳಲ್ಲಿ ಹೊರಟಿವೆ. ಹರ್ಯಾಣದಿಂದ 1,00,000 ಮತ್ತು ಪಂಜಾಬ್ ನಿಂದ 80,000 ಟ್ರಾಕ್ಟರ್ ಗಳು ದೆಹಲಿಗೆ ಗಡಿಗಳಿಗೆ ಮಂಗಳವಾರ ಮುಂಜಾನೆ ತಲುಪಲಿವೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ. ಇನ್ನೂ ಕೆಲವು ರಾಜ್ಯಗಳಿಂದ ಟ್ರಾಕ್ಟರ್ ಗಳು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ 2 ಲಕ್ಷಕ್ಕೂ ಹೆಚ್ಚು ಟ್ರಾಕ್ಟರ್ ಗಳು ದೆಹಲಿಗೆ ತಲುಪುವ ಸಾಧ್ಯತೆಯಿದೆ.

ಪಂಜಾಬ್ ಮತ್ತು ಹರ್ಯಾಣಗಳಿಂದ ಶುಕ್ರವಾರದಿಂದ ಟ್ರಾಕ್ಟರ್ ಗಳು ದೆಹಲಿಯತ್ತ ಹೊರಟಿವೆ. ಭಾನುವಾರ ಮತ್ತೆ 10,000 ಟ್ರಾಕ್ಟರ್ ಗಳು ಹೊರಟಿವೆ ಎಂದು ವರದಿಗಳು ತಿಳಿಸಿವೆ.

- Advertisement -

ಆದಾಗ್ಯೂ, ಪಂಜಾಬ್ ಮತ್ತು ಹರ್ಯಾಣದಿಂದ 50,000ಕ್ಕೂ ಹೆಚ್ಚು ಟ್ರಾಕ್ಟರ್ ಗಳು ದೆಹಲಿಯತ್ತ ಹೆದ್ದಾರಿಗಳಲ್ಲಿ ಚಲಿಸುತ್ತಿವೆ ಎಂದು ಸರಕಾರದ ಗುಪ್ತಚರ ವರದಿಗಳೇ ತಿಳಿಸಿವೆ. ಹೀಗಾಗಿ ನಾಳೆ ದೆಹಲಿ ಸುತ್ತಮುತ್ತ ಸಂಪೂರ್ಣ ಸಂಚಾರ ಅಸ್ತವ್ಯಸ್ಥವಾಗುವ ಲಕ್ಷಣವಿದೆ.

ಈಗಾಗಲೇ ಸಾವಿರಾರು ಟ್ರಾಕ್ಟರ್ ಗಳಲ್ಲಿ ರೈತರು ದೆಹಲಿ ಗಡಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನಷ್ಟು ಟ್ರಾಕ್ಟರ್ ಗಳು ನಾಳೆ ದೆಹಲಿ ಗಡಿ ತಲುಪುವುದರಿಂದ ಹೆದ್ದಾರಿಗಳು ಸಂಪೂರ್ಣ ರೈತ ಹೋರಾಟಗಾರರಿಂದ ತುಂಬುವ ನಿರೀಕ್ಷೆಯಿದೆ.   



Join Whatsapp