ಸಿಂಘು ಗಡಿ ಮತ್ತೆ ಉದ್ವಿಗ್ನ : ರೈಲು ತಡೆದು ಪ್ರತಿಭಟಿಸುವುದಾಗಿ ರೈತರ ಎಚ್ಚರಿಕೆ

Prasthutha|

ನವದೆಹಲಿ : ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮುಂದುವರಿದಿರುವ ನಡುವೆ, ಸಿಂಘು ಗಡಿಯಲ್ಲಿ ಮತ್ತೆ ಪರಿಸ್ಥಿತಿ ಉದ್ವಿಗ್ನವಾಗಿದೆ. ರಸ್ತೆಗಳಿಗೆ ಬ್ಯಾರಿಕೇಡ್ ಹಾಕುವ ಮೂಲಕ ಸ್ಥಳೀಯರ ಸಂಚಾರ ನಿಯಂತ್ರಿಸಿ, ಸ್ಥಳೀಯರನ್ನು ಉದ್ರಿಕ್ತರನ್ನಾಗಿಸಿ, ಎತ್ತಿಕಟ್ಟುವ ಬಿಜೆಪಿ ಸರಕಾರದ ನೀತಿಗೆ ಆಕ್ರೋಶ ವ್ಯಕ್ತವಾಗಿದೆ.

- Advertisement -

ರಸ್ತೆ ಬ್ಯಾರಿಕೇಡ್ ತೆರವುಗೊಳಿಸಿ, ಸ್ಥಳೀಯರ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ, ಮಂಡ್ಸೌರ್ ನಲ್ಲಿ ರೈಲು ತಡೆಯಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ.

ರಸ್ತೆ ತಡೆ ಮಾಡಿ ಸ್ಥಳೀಯ ಜನರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಸ್ಥಳೀಯರ ಸಂಪೂರ್ಣ ಸಹಕಾರ ಇದೆ. ನೀವು ಬ್ಯಾರಿಕೇಡ್ ಗಳನ್ನು ತೆಗೆಯದಿದ್ದರೆ ಸ್ಥಳಿಯರು ದಂಗೆ ಏಳುತ್ತಾರೆ. ನಾವು ಇಲ್ಲಿಂದ ಕದಲುವುದಿಲ್ಲ. ಪೊಲೀಸರೇ ರಸ್ತೆಗಳಿಗೆ ಹಾಕಿರುವ ಬ್ಯಾರಿಕೇಡ್ ಗಳನ್ನು ತೆಗೆಯಿರಿ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

- Advertisement -

ಬಿಜೆಪಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಬೃಹತ್ ಸಂಖ್ಯೆಯ ರೈತರು ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.  

Join Whatsapp