ಬಜೆಟ್ 2021 ಮುಖ್ಯಾಂಶಗಳು | ಒಂದು ದೇಶ, ಒಂದು ರೇಶನ್ ಕಾ‍ರ್ಡ್ ಪರಿಕಲ್ಪನೆ ಜಾರಿಗೆ

Prasthutha|

2021-2022ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್ತಿನಲ್ಲಿ ಮಂಡಿಸಿದ್ದು, ಅದರ ಮುಖ್ಯಾಂಶಗಳು ಇಲ್ಲಿವೆ.ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿ ಸೆಸ್ (ಎಐಡಿಸಿ) ಅನ್ನು ವಿಧಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಪೆಟ್ರೋಲ್ ಮೇಲೆ ಲೀಟರ್ ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ. ಕೃಷಿ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ.

- Advertisement -

ಕೈಗೆಟುಕುವ ಮನೆ ಖರೀದಿಸಲು ಸಿಗುವ 1.5 ಲಕ್ಷ ರೂ. ಸಾಲ ಸೌಲಭ್ಯ ಇನ್ನೂ ಒಂದು ವರ್ಷ ವಿಸ್ತರಣೆ

ಕೋವಿಡ್ ಸೆಸ್ ವಿಧಿಸದಿರಲು ನಿರ್ಧಾರ

- Advertisement -

75 ವರ್ಷ ಮೇಲ್ಪಟ್ಟವರು ತೆರಿಗೆ ಪಾವತಿಸುವ ಅಗತ್ಯವಿಲ್ಲ

ಎಲ್ಲಾ ವರ್ಗದ ಕಾರ್ಮಿಕರಿಗೆ ಇನ್ನುಮುಂದೆ ಕನಿಷ್ಠ ವೇತನ ಅನ್ವಯವಾಗಲಿದೆ. ಸಮರ್ಪಕ ರಕ್ಷಣೆಯೊಂದಿಗೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡಲು ಕ್ರಮ

ಒಂದೇ ದೇಶ, ಒಂದೇ ರೇಶನ್ ಕಾ‍ರ್ಡ್ ಪರಿಕಲ್ಪನೆ ಜಾರಿಗೆ69 ಕೋಟಿ ಜನ ಅಂದರೆ 86% ಫಲಾನುಭವಿಗಳು ಒಂದು ರಾಷ್ಟ್ರ, ಒಂದು ಪಡಿತರ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ಗ್ರಾಮೀಣ ಮೂಲ ಅಭಿವೃದ್ಧಿ ನಿಧಿಗೆ 30,000 ಕೋಟಿಯಿಂದ 40,000 ಕೋಟಿ ರೂ. ಮತ್ತು ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.

ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ

ಕೃಷಿ ಕ್ಷೇತ್ರದ ಸಂವರ್ಧನೆಗಾಗಿ 2022ರ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಹಲವು ಕಲ್ಯಾಣ ಯೋಜನೆಗಳನ್ನು ನವೀಕರಣಗೊಳಿಸಲಾಗಿದೆ

2022ರ  ಹಣಕಾಸು ವರ್ಷದಲ್ಲಿ 2 ಪಿಎಸ್‌ ಯು ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ

1 ಕೋಟಿ ಜನರಿಗೆ ಉಜ್ವಲಾ ಯೋಜನೆ ವಿಸ್ತರಣೆ. ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳು ಯೋಜನೆ ವ್ಯಾಪ್ತಿಗೆ

1.15 ಲಕ್ಷ ಕೋಟಿ ರೂ. ರೈಲ್ವೆ ಇಲಾಖೆ ಮತ್ತು ವಿಮಾನಗಳ ಖಾಸಗೀಕರಣಕ್ಕೆ ವಿನಿಯೋಗ 2 ಮತ್ತು ಮೂರನೇ ಹಂತದ ನಗರಗಳಲ್ಲಿ ವಿಮಾನಗಳ ಖಾಸಗೀಕರಣ

ಮಾರ್ಚ್‌ 2022ರ ಹೊತ್ತಿಗೆ 8500 ಕಿ.ಮೀ. ಹೆದ್ದಾರಿ ನಿರ್ಮಾಣ, ತಮಿಳುನಾಡಿನಲ್ಲಿ 3500 ಕಿ.ಮೀ. ಕಾರಿಡಾರ್‌, ಕೇರಳದಲ್ಲಿ 65,000 ಕೋಟಿ ರೂ.ಗಳ 1100 ಕಿ.ಮೀ. ಉದ್ದದ ಹೆದ್ದಾರಿ, ಪಶ್ಚಿಮ ಬಂಗಾಳದಲ್ಲಿ 95,000 ಕೋಟಿ ರೂ. ವೆಚ್ಚದ 675 ಕಿ.ಮೀ. ಹೆದ್ದಾರಿ ಮತ್ತು ಮುಂದಿನ 3 ವರ್ಷಗಳಲ್ಲಿ ಅಸ್ಸಾಮ್‌ನಲ್ಲಿ 1300. ಕಿ.ಮೀ. ಹೆದ್ದಾರಿ ನಿರ್ಮಾಣ.

61,000 ಕೋಟಿ ರೂ.ಗಳ ಹೊಸ ಆರೋಗ್ಯ ಮೂಲ ಸೌಕರ್ಯಗಳ ಯೋಜನೆ.

17,000 ಗ್ರಾಮೀಣ ಮತ್ತು 11,000 ನಗರ ಆರೋಗ್ಯ ಕೇಂದ್ರಗಳ ಆರಂಭ.

ಮುಂದಿನ ಆರು ವರ್ಷಗಳಿಗೆ ಆರೋಗ್ಯ ಸೇವೆಗೆ 64,180 ಕೋಟಿ ರೂ.ಗಳು ಈ ಮೊತ್ತ ಮೂರು ಹಂತಗಳಲ್ಲಿ ವಿನಿಯೋಗಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಆಡಿಯಲ್ಲಿ ಕಾರ್ಯಚಟುವಟಿಕೆಗಳು.

ಆತ್ಮನಿರ್ಭರ ಭಾರತಕ್ಕೆ ಆದ್ಯತೆ

Join Whatsapp