ರೈತ ಕ್ರಾಂತಿ | ಟಿಕ್ರಿ ಗಡಿಯಲ್ಲಿ ‘ಗೌರಿ ಮೀಡಿಯಾ’ ತಂಡಕ್ಕೆ ಪಿಸ್ತೂಲ್ ತೋರಿಸಿ ಬೆದರಿಕೆ

Prasthutha|

ನವದೆಹಲಿ : ಗಣರಾಜ್ಯೋತ್ಸವ ದಿನ ರೈತರ ಪ್ರತಿಭಟನೆ ವೇಳೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಚಿತ್ರ ತಂಡವೊಂದನ್ನು ಸಂದರ್ಶನ ಮಾಡಲು ಹೋಗಿದ್ದ ಕರ್ನಾಟಕ ಮೂಲದ ‘ಗೌರಿ ಮೀಡಿಯಾ’ ತಂಡದ ಸದಸ್ಯರ ಮೇಲೆ ಗುರುವಾರ ರಾತ್ರಿ ಹಲ್ಲೆ ಮಾಡುವ ಬೆದರಿಕೆಯೊಡ್ಡಿದ ಘಟನೆ ವರದಿಯಾಗಿದೆ.

- Advertisement -

ರೈತ ಹೋರಾಟದ ಸಾಕ್ಷ್ಯಚಿತ್ರ ನಿರ್ಮಿಸಲೆಂದು ದೆಹಲಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಪೆಡಿಸ್ಟ್ರಿಯನ್ ಪಿಕ್ಚರ್ಸ್ ತಂಡ ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯ ಬಳಿ ಹಲ್ಲೆಗೊಳಗಾಗಿತ್ತು. ಇವರನ್ನು ಸಂದರ್ಶನ ಮಾಡಲು ತೆರಳಿದ್ದ ‘ಗೌರಿ ಮೀಡಿಯಾ’ ತಂಡದ ಸ್ವಾತಿ, ಮಮತಾ, ಕಾವ್ಯ ಮತ್ತು ದೊಡ್ಡಿಪಾಳ್ಯ ನರಸಿಂಹಮೂರ್ತಿಗೆ ಬೆದರಿಕೆಯೊಡ್ಡಲಾಗಿದೆ.

ಗಣರಾಜ್ಯೋತ್ಸವ ದಿನದ ಹಲ್ಲೆಯಿಂದಾಗಿ ಗಾಯಗೊಂಡಿದ್ದ ಪೆಡಿಸ್ಟ್ರಿಯನ್ ಪಿಕ್ಚರ್ಸ್ ತಂಡ ಹರ್ಯಾಣ ಗಡಿಯ ನಯಾಗಾಂವ್ ನಲ್ಲಿ ತಂಗಿತ್ತು. ಗೌರಿ ಮೀಡಿಯಾ ತಂಡ ಅವರನ್ನು ಸಂದರ್ಶನ ಮಾಡಲು ತೆರಳಿದಾಗ, ಅಲ್ಲಿಗೆ ಧಾವಿಸಿದ ಗುಂಪೊಂದು ಪಿಸ್ತೂಲ್ ತೋರಿಸಿ, ತಂಡದ ಸದಸ್ಯರಿಗೆ ಬೆದರಿಕೆಯೊಡ್ಡಿದೆ.

- Advertisement -

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಸ್ಥಳಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಸ್ಥಳಕ್ಕೆ ಬಂದು, ಮಾಧ್ಯಮ ತಂಡಕ್ಕೆ ರಕ್ಷಣೆ ಒದಗಿಸಿದರು ಎಂದು ವರದಿಯಾಗಿದೆ.

ರೈತರ ಹೋರಾಟವನ್ನು ದೇಶದ್ರೋಹಿಗಳ ಹೋರಾಟ ಎಂಬಂತೆ ಬಿಂಬಿಸುತ್ತಿರುವ ಮುಖ್ಯವಾಹಿನಿ ಮಾಧ್ಯಮಗಳ ಸವಾಲಿನ ನಡುವೆ, ಪರ್ಯಾಯ ಮಾಧ್ಯಮಗಳು ಸತ್ಯವನ್ನು ಜಗತ್ತಿಗೆ ಸಾರುವ ಕೆಲಸ ಮಾಡುತ್ತಿವೆ. ಇಂತಹ ಪರ್ಯಾಯ ಮಾಧ್ಯಮಗಳನ್ನೂ ಬೆದರಿಸುವ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.   

Join Whatsapp