ರಾತ್ರೋರಾತ್ರಿ ದೊಡ್ಡ ಸಂಖ್ಯೆಯಲ್ಲಿ ಹಿಂದಿರುಗಿದ ರೈತರು | ಗಾಝಿಪುರ ಗಡಿ ಬಂದ್; ತೀವ್ರಗೊಂಡ ಪ್ರತಿಭಟನೆ

Prasthutha|

ನವದೆಹಲಿ : ಉತ್ತರ ಪ್ರದೇಶ-ದೆಹಲಿ ನಡುವಿನ ಗಡಿ ಪ್ರದೇಶ ಗಾಝಿಪುರ ಬಾರ್ಡರ್ ನಲ್ಲಿ ರಾತ್ರೋರಾತ್ರಿ ಮತ್ತೆ ರೈತರು ಜಮಾವಣೆಗೊಂಡಿದ್ದಾರೆ. ಉತ್ತರ ಪ್ರದೇಶದ ಮುಜಾಫ್ಫರ್ ನಗರದಿಂದ ರೈತರ ದಂಡು ದೊಡ್ಡ ಸಂಖ್ಯೆಯಲ್ಲಿ ಹರಿದು ಬಂದ ಕಾರಣ, ಗಾಝಿಪುರ ಗಡಿ ಬಂದ್ ಆಗಿದೆ.

- Advertisement -

ಇನ್ನು ಸಿಂಘು, ಔಚಂಡಿ, ಮಂಗೇಶ್ ಸಬೋಲಿ, ಪಿಯಾವು, ಮಣಿಯಾರಿ ಬಾರ್ಡರ್ ಗಳೂ ಸಹ ಬಂದ್ ಆಗಿದ್ದು, ವಿವಿಧ ಕಡೆಗಳಲ್ಲಿ ರಸ್ತೆಗಳನ್ನು ಬದಲಿಸಿ, ಪ್ರಯಾಣಿಕರಿಗೆ ಅನುವು ಮಾಡಿಕೊಡಲಾಗಿದೆ.

ಕೇಂದ್ರ ಸರಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಗಣರಾಜ್ಯೋತ್ಸವ ದಿನ ಕೆಲವು ದುಷ್ಕರ್ಮಿಗಳ ಕುಮ್ಮಕ್ಕಿನಿಂದ ಹಿಂಸಾತ್ಮಕ ರೂಪ ತಾಳಿತ್ತು, ಗಣರಾಜ್ಯೋತ್ಸವದ ದಿನ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಗೆ ಆಗಮಿಸಿದ್ದ ರೈತರಲ್ಲಿ ಹೆಚ್ಚಿನವರು ನಿನ್ನೆ ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದರು. ಈ ವೇಳೆ ರೈತರು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬಂತೆ ಬಿಜೆಪಿ ಬೆಂಬಲಿಗ ಮಾಧ್ಯಮಗಳು ಬಿಂಬಿಸಲಾರಂಭಿಸಿದ್ದವು.

- Advertisement -

ಹೀಗಾಗಿ ರೈತ ನಾಯಕರೂ ಕೊಂಚ ವಿಚಲಿತರಾಗಿದ್ದರು. ಸಂಜೆ ವೇಳೆ ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನೂ ಸ್ಥಳದಲ್ಲಿ ನಿಯೋಜಿಸಿ ಭಯಭೀತ ವಾತಾವರಣ ಸೃಷ್ಟಿಸಲಾಗಿತ್ತು. ಹೀಗಾಗಿ ವಿಷಯ ಅರಿತ ರೈತರು ರಾತೋರಾತ್ರಿ ಮತ್ತೆ ಪ್ರತಿಭಟನಾ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಧಾವಿಸಿದ್ದಾರೆ. ನಸುಕಿನ ವೇಳೆಯೇ ದೊಡ್ಡ ಸಂಖ್ಯೆಯ ರೈತರು ಹೆದ್ದಾರಿಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

Join Whatsapp