ನವದೆಹಲಿ : ಕೇಂದ್ರ ಸರಕಾರದ ವಿರುದ್ಧ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನಕಾರರು ರಾಷ್ಟ್ರ ರಾಜಧಾನಿಯತ್ತ ಬಲವಂತವಾಗಿದ್ದು, ಮುನ್ನುಗ್ಗುತ್ತಿದ್ದು, ಗಡಿ ಪ್ರದೇಶಗಳು ಅಕ್ಷರಶಃ ರಣರಂಗವಾಗಿದೆ.
ದೆಹಲಿ ಗಡಿ ಪ್ರವೇಶಿಸಿರುವ ರೈತರು ಐಟಿಒ ಸರ್ಕಲ್ ಬಳಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಶ್ರುವಾಯು ಸಿಡಿಸಿದ್ದಾರೆ. ರೈತರೂ ಕೈಗಳಲ್ಲಿ ಲಾಠಿ ಹಿಡಿದು ಪೊಲೀಸರನ್ನೇ ಅಟ್ಟಾಡಿಸಿದ ಘಟನೆ ಕೆಲವೆಡೆ ನಡೆದಿದೆ. ಪೊಲೀಸರ ಅಶ್ರುವಾಯುಗೆ ಹಿಮ್ಮೆಟ್ಟುತ್ತಲೇ ಇಲ್ಲ.
ರೈತರ ಮೇಲೆ ಪೊಲೀಸರು ಪ್ರಯೋಗಿಸಿದ ಅಶ್ರುವಾಯು ಶೆಲ್ ಗಳನ್ನು ಹೆಕ್ಕಿ ಮತ್ತೆ ಪೊಲೀಸರತ್ತಲೇ ಪ್ರತಿಭಟನಕಾರರು ಎಸೆಯುತ್ತಿದ್ದಾರೆ. ರೈತರನ್ನು ತಡೆಯಲು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿದ್ದ ಬಸ್ ಗಳನ್ನೂ ತಳ್ಳಲಾಗಿದೆ. ಬ್ಯಾರಿಕೇಡ್ ಗಳನ್ನು ತರಗೆಲೆಗಳಂತೆ ರೈತರು ಕಿತ್ತೆಸೆದಿದ್ದಾರೆ. ಕೆಲವೆಡೆ ರೈತರು ಖಡ್ಗಗಳನ್ನು ಹಿಡಿದುಕೊಂಡಿದ್ದ ದೃಶ್ಯಗಳೂ ಕಂಡುಬಂದಿವೆ.