ಬ್ಯಾರಿಕೇಡ್ ಮುರಿದವರು ನಾವಲ್ಲ : ಸಂಯುಕ್ತ ಕಿಸಾನ್ ಮೋರ್ಚಾ | ಕೆಲವೆಡೆ ಶಾಂತಿಯುತ ಟ್ರಾಕ್ಟರ್ ಪರೇಡ್; ರೈತರ ಮೇಲೆ ಹೂಮಳೆ!

Prasthutha|

ನವದೆಹಲಿ : ಸಿಂಘು ಮತ್ತು ಟಿಕ್ರಿ ಗಡಿ ಕೇಂದ್ರ ಭಾಗದಲ್ಲಿ ರೈತರ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಗಳನ್ನು ಮುರಿದು, ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವುದು ತಮ್ಮ ಸಂಘಟನೆಯವರಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.

- Advertisement -

“ಬ್ಯಾರಿಕೇಡ್ ಗಳನ್ನು ಮುರಿದವರು ಕಿಸಾನ್ ಮಜ್ದೂರ್ ಸಂರ್ಘರ್ಷ ಸಮಿತಿಗೆ ಸೇರಿದವರು. ಪೊಲೀಸರು ರೈತರಿಗೆ ಅನುವು ಮಾಡಿಕೊಟ್ಟ ನಂತರ ಸಂಯುಕ್ತ ಕಿಸಾನ್ ಮೋರ್ಚಾದ ಟ್ರಾಕ್ಟರ್ ಪರೇಡ್ ನಿದಿಯಂತೆ ಪ್ರಾರಂಭವಾಗಲಿದೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರೊಬ್ಬರು ಹೇಳಿದ್ದಾರೆ.

ದೆಹಲಿ ಗಡಿ ಭಾಗಗಳಲ್ಲಿ ಕೆಲವೆಡೆ ಪ್ರತಿಭಟನೆ ಹಿಂಸೆಗೆ ತಿರುಗಿದರೆ, ಕೆಲವೆಡೆ ನಿಗದಿಯಾಗಿರುವಂತೆ ಶಾಂತಿಯುತವಾಗಿ ರೈತರ ಟ್ರಾಕ್ಟರ್ ಪರೇಡ್ ನಡೆದಿದೆ. ಟ್ರಾಕ್ಟರ್ ಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಂಡು ಸಾಗುತ್ತಿದ್ದ ರೈತರ ಮೇಲೆ ಕೆಲವೆಡೆ ಹೂವುಗಳನ್ನು ಸುರಿಸಿ, ಪ್ರತಿಭಟನೆಯ ಬೆಂಬಲಿಗರು ಹರ್ಷಿತರಾದರು. ಅಲ್ಲದೆ, ಗಣರಾಜ್ಯೋತ್ಸವದ ಸಂಭ್ರಮವನ್ನು ವ್ಯಕ್ತಪಡಿಸಿದರು. ಈ ಕುರಿತ ವೀಡಿಯೊಗಳೂ ಲಭ್ಯವಾಗಿವೆ.  

- Advertisement -

ದೆಹಲಿ ಪ್ರವೇಶಿಸುವ ವೇಳೆ ವಿವಿಧೆಡೆಗಳಲ್ಲಿ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಕೆಲವೆಡೆ ಬ್ಯಾರಿಕೇಡ್ ಗಳನ್ನು ಮುರಿದು, ಮುನ್ನುಗ್ಗಿದ ಘಟನೆಗಳು ನಡೆದಿವೆ.  

Join Whatsapp