ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಭಟನೆ 53ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ, ದೆಹಲಿಯ ನೆರೆ ರಾಜ್ಯ ಹರ್ಯಾಣದಲ್ಲಿ ರೈತ ಹೋರಾಟಕ್ಕೆ ಬೆಂಬಲ ನೀಡಿರುವ ಸುಮಾರು 60 ಗ್ರಾಮಗಳಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಅನೇಕ ಗ್ರಾಮಗಳಲ್ಲಿ ಬಿಜೆಪಿಯ ಸಚಿವರು, ಶಾಸಕರುಗಳು ಮತ್ತು ಬಿಜೆಪಿ ವಿರುದ್ಧ ಬಹಿಷ್ಕರಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ರೈತರು ಗ್ರಾಮದ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಹೋರ್ಡಿಂಗ್ ಗಳನ್ನು ಹಾಕಿದ್ದು, ಬಿಜೆಪಿ ಮತ್ತು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮಕ್ಕೆ ಪ್ರವೇಶಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಗಳನ್ನು ನೀಡಲಾಗಿದೆ.
ಫತೇಬಾದ್ ನ ಅರ್ಹೆವಾನ್, ಭಾನಿ, ಖೇರಾ, ತಲ್ವಾರಾ, ಬಾರಾ, ಸಿದಾನಿ, ದನಿ, ಬಾಬನ್ಪುರ, ಕಾನಾ, ಲಂಬಾ ಹೀಗೆ ಸುಮಾರು 60 ಗ್ರಾಮಗಳಲ್ಲಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಈ ಗ್ರಾಮಗಳ ನಿವಾಸಿಗಳು ಆಡಳಿತ ಪಕ್ಷಗಳ ಮುಖಂಡರ ವಿರುದ್ಧ ಬ್ಯಾನರ್ ಗಳನ್ನು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.