ರೈತರ ಪ್ರತಿಭಟನೆ | 21 ದಿನಗಳಲ್ಲಿ 22 ಪ್ರತಿಭಟನಕಾರರ ಮೃತ್ಯು

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನು ವಿರೋಧಿಸಿ ಕಳೆದ 21 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿದೆ.

ದೆಹಲಿ ಹಾಗೂ ಹರ್ಯಾಣ ಗಡಿ ಪ್ರದೇಶಗಳಲ್ಲಿ ರೈತರು ಭಾರಿ ಆಂದೋಲನ ನಡೆಸುತ್ತಿದ್ದಾರೆ. ಚಳಿಗಾಲ ಆರಂಭವಾಗಿರುವಂತೆಯೇ ದೆಹಲಿಯಲ್ಲಿ ತೀವ್ರ ಚಳಿ ಅನುಭವವಾಗುತ್ತಿದೆ. ದೆಹಲಯಲ್ಲಿ 4.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೂ, ರೈತರ ಪ್ರತಿಭಟನೆಯ ಕಾವು ಜೋರಾಗಿಯೇ ಇದೆ. ಪ್ರತಿಭಟನೆಗೆ ಸಾವಿರಾರು ರೈತರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ.  

- Advertisement -

ಟಿಕ್ರಿ ಮತ್ತು ಸಿಂಘು ಗಡಿಗಳಲ್ಲಿ ವಿಪರೀತ ಚಳಿಯನ್ನು ಲೆಕ್ಕಿಸದೇ ಪ್ರತಿಭಟಿಸುತ್ತಿರುವ ರೈತರು ಮೃತಪಟ್ಟಿದ್ದಾರೆ. ನಿನ್ನೆ ನಾಲ್ವರು ಪ್ರತಿಭಟನೆಯಿಂದ ಹಿಂದಿರುಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿ ಬರುವಾಗ, ಹಿಂದಿರುಗುವಾಗ ನಡೆದ ಬೇರೆಬೇರೆ ಅಪಘಾತಗಳಲ್ಲಿ ಒಟ್ಟು ಎಂಟು ಮಂದಿ ಸಾವಿಗೀಡಾಗಿದ್ದಾರೆ.  

- Advertisement -