ಮಂಗಳೂರು | ಅಡ್ಡೂರಿನಲ್ಲಿ ಯುವಕನ ಮೇಲೆ ತಲವಾರು ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು

Prasthutha|

ಮಂಗಳೂರು : ನಗರದ ಹೊರವಲಯ ಅಡ್ಡೂರಿನಲ್ಲಿ ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಬಗ್ಗೆ ವರದಿಯೊಂದು ತಿಳಿಸಿದೆ. ಮಂಗಳವಾರ ತಡರಾತ್ರಿ ಯುವಕನೊಬ್ಬನ ಮೇಲೆ ಮೂವರು ದುಷ್ಕರ್ಮಿಗಳ ತಂಡದಿಂದ ತಲವಾರು ದಾಳಿ ನಡೆದಿದೆ.

ಅಡ್ಡೂರು ನಿವಾಸಿ ಮುಹಮ್ಮದ್ ತಾಜುದ್ದೀನ್ (30) ದಾಳಿಗೊಳಗಾಗಿ ಗಾಯಗೊಂಡವರು. ತಾಜುದ್ದೀನ್ ಮಂಗಳವಾರ ತಡರಾತ್ರಿ ಅಡ್ಡೂರಿನಿಂದ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ. ತಾಜುದ್ದೀನ್ ನ ತೊಡೆ, ಕೈ ಸಹಿತ ಹಲವೆಡೆ ಗಾಯಗಳಾಗಿವೆ.

- Advertisement -

ಹಳೆ ವೈಷಮ್ಯದಿಂದ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗಾಯಗೊಂಡ ತಾಜುದ್ದೀನ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯಕ್ಕೆ ಸಂಬಂಧಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

- Advertisement -