ರೈತರ ಪ್ರತಿಭಟನೆಗೆ ಹೊಸ ತಿರುವು | ಬುಧವಾರ ಮಮತಾ ಬ್ಯಾನರ್ಜಿ ಜೊತೆ ಟಿಕಾಯತ್‌ ಚರ್ಚೆ

Prasthutha|

ನವದೆಹಲಿ : ಕಳೆದ ಆರು ತಿಂಗಳಿನಿಂದ ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹೊಸ ತಿರುವು ಪಡೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ರೈತ ಮುಖಂಡ, ಭಾರತೀಯ ಕಿಸಾನ್‌ ಒಕ್ಕೂಟದ ನಾಯಕ ರಾಕೇಶ್‌ ಟಿಕಾಯತ್‌ ಬುಧವಾರ ಕೊಲ್ಕತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗೆ ಮಹತ್ವದ ಚರ್ಚೆ ನಡೆಸಲಿದ್ದು, ಇದು ರೈತ ಹೋರಾಟಕ್ಕೆ ಹೊಸ ತಿರುವು ನೀಡಲಿದೆ ಎಂದು ಹೇಳಲಾಗುತ್ತಿದೆ.

- Advertisement -

ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ತಂತ್ರಗಾರಿಕೆಯನ್ನು ‌ಹೆಣೆಯುವ ನಿಟ್ಟಿನಲ್ಲಿ ಮಮತಾ ಜೊತೆ ಟಿಕಾಯತ್ ಚರ್ಚೆ ನಡೆಸಲಿದ್ದಾರೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ವಿಜಯಕ್ಕೆ ಈ ವೇಳೆ ಟಿಕಾಯತ್‌ ಅಭಿನಂದಿಸಲಿದ್ದಾರೆ.

Join Whatsapp