ನವದೆಹಲಿ : ದೆಹಲಿ ಗಡಿ ಭಾಗಗಳಲ್ಲಿ ರೈತ ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಪೊಲೀಸರು ಹಾಕಿರುವ ಬ್ಯಾರಿಕೇಡ್, ಮುಳ್ಳು ತಂತಿಗಳು, ಕಾಂಕ್ರೀಟ್ ಗೋಡೆಗಳು, ಮುಳ್ಳು ಸರಳುಗಳನ್ನು ತೆಗೆದು ಹಾಕುವಂತೆ ಜಾಗತಿಕ ಮಾನವ ಹಕ್ಕುಗಳ ಸಂಘಟನೆಯಾದ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗ ಒತ್ತಾಯಿಸಿದೆ.
ಟ್ರಾಕ್ಟರ್ ರ್ಯಾಲಿ ನಂತರ ನಡೆಯುತ್ತಿರುವ ರೈತರ ಅನಿಯಂತ್ರಿತ ಬಂಧನವನ್ನು ನಿಲ್ಲಿಸುವಂತೆಯೂ ಆಯೋಗ ಆಗ್ರಹಿಸಿದೆ.
ರೈತರ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸುವ ಬದಲು, ಸರಕಾರ ಅವರ ಮೇಲೆ ದೌರ್ಜನ್ಯ ಎಸಗುತ್ತಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆಯೋಗ ದೂರಿದೆ.
ಬ್ಯಾರಿಕೇಡ್ ಗಳನ್ನು ತೆಗೆಯಬೇಕು ಮತ್ತು ಬಂಧಿಸಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಯೋಗವು ಆಗ್ರಹಿಸಿದೆ.