ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಚಿತ್ರ ಪ್ರದರ್ಶನಕ್ಕೆ ರೈತರ ವಿರೋಧ

Prasthutha|

► ಸಿನೆಮಾ ಪೋಸ್ಟರ್‌ಗಳನ್ನು ಹರಿದು ಹಾಕಿ ರೈತರ ಆಕ್ರೋಶ

- Advertisement -

ಪಂಜಾಬ್: ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡದ ನಟ ಅಕ್ಷಯ್ ಕುಮಾರ್ ವಿರುದ್ಧ ಭಾರತಿ ಕಿಸಾನ್ ಯೂನಿಯನ್ ಕಾರ್ಯಕರ್ತರು ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರದ ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೂ ಅಕ್ಷಯ್‌ ಕುಮಾರ್ ಅಭಿನಯದ ‘ಸೂರ್ಯವಂಶಿ’ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ನೀಡದ ನಟ ಅಕ್ಷಯ್ ಕುಮಾರ್ ಅವರನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳ ಹೊರಗೆ ಹಾಕಲಾಗಿದ್ದ ಸೂರ್ಯವಂಶಿ ಸಿನೆಮಾ ಪೋಸ್ಟರ್‌ಗಳನ್ನು ಪ್ರತಿಭಟನಾಕಾರರು ಹರಿದು ಹಾಕಿದ್ದಾರೆ. ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಅಜಯ್ ದೇವಗನ್ ಹಾಗೂ ಕತ್ರಿನಾ ಕೈಪ್ ಅಭಿಯನಯದ ಸೂರ್ಯವಂಶಿ ಚಿತ್ರವನ್ನು ಕರ್ನಾಟಕದ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ.

- Advertisement -

’ಸೂರ್ಯವಂಶಿ’ ಚಿತ್ರವು ಮುಂಬೈನಲ್ಲಿ 1993, 2002, 2006 ಮತ್ತು 2008ರಲ್ಲಿ ನಡೆದ ಸರಣಿ ಉಗ್ರರ ದಾಳಿಗಳ ಘಟನೆ ಆಧಾರಿತ ಸಿನಿಮಾ. ಸೂರ್ಯವಂಶಿ ಚಿತ್ರವನ್ನು ಕರಣ್‌ ಜೋಹರ್‌ ಮತ್ತು ರೋಹಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

Join Whatsapp