ಪತ್ರಕರ್ತರಿಗೆ ಭಾರತ 3ನೇ ಅತ್ಯಂತ ಅಪಾಯದ ರಾಷ್ಟ್ರ !

Prasthutha|

ನವದೆಹಲಿ: ಮೆಕ್ಸಿಕೋ ಹಾಗೂ ಅಫ್ಘಾನಿಸ್ತಾನ ರಾಷ್ಟ್ರವನ್ನು ಹೊರತುಪಡಿಸಿದರೆ ಭಾರತವು ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಸ್ಟಾಟಿಸ್ಟಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.

- Advertisement -

ಯುದ್ಧ ಹಾಗೂ ಆಂತರಿಕ ಕಲಹಗಳಿಂದಾಗಿ ಅಫ್ಘಾನಿಸ್ತಾನ, ಸಿರಿಯ-ಯೆಮನ್ ದೇಶಗಳಲ್ಲಿ  ದಿನನಿತ್ಯ ಪತ್ರಕರ್ತರೂ ಸೇರಿದಂತೆ ಹತ್ತಾರು ಅಮಾಯಕರು ಬಲಿಯಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಯಾವುದೇ ಯುದ್ಧ ಅಥವಾ ಬಿಕ್ಕಟ್ಟಿನ ಸಂದರ್ಭವಿಲ್ಲ. ಆದರೂ ಪ್ರಸ್ತಕ್ತ ವರ್ಷ ಭಾರತದಲ್ಲಿ ಮೂವರು ಪರ್ತಕರ್ತರ ಹತ್ಯೆಯಾಗಿದೆ. ಭಾರತದಲ್ಲಿ ಭಯದ ವಾತಾವರಣದಲ್ಲಿ ಕೆಲಸ ಮಾಡುವ ಪತ್ರಕರ್ತರ ಸಂಖ್ಯೆ ಅಧಿಕವಾಗಿದೆ ಎಂದು ವರದಿ ಹೇಳಿದೆ.

 ಪತ್ರಕರ್ತರಿಗೆ ಅತ್ಯಂತ ಅಪಾಯದ ರಾಷ್ಟ್ರವೆಂದು ಸ್ಟಾಟಿಸ್ಟಾ ಸಂಸ್ಥೆಯು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೆಕ್ಸಿಕೋ ಮೊದಲನೇ ಸ್ಥಾನದಲ್ಲಿದೆ. ಮೆಕ್ಸಿಕೋದಲ್ಲಿ ಪ್ರಸಕ್ತ ವರ್ಷ 7 ಪತ್ರಕರ್ತರ ಹತ್ಯೆಯಾಗಿದೆ. ಅಫ್ಘಾನಿಸ್ತಾನದಲ್ಲಿ 6 ನಂತರದ  ಸ್ಥಾನದಲ್ಲಿರುವ ಭಾರತದಲ್ಲಿ ಮೂವರು ಪತ್ರಕರ್ತರ ಹತ್ಯೆಯಾಗಿದೆ. ಸಂಸ್ಥೆಯ ಸಮೀಕ್ಷೆ ಪ್ರಕಾರ ಪತ್ರಕರ್ತರು ಹಾಗೂ ಮಾಧ್ಯಮ ಸಿಬ್ಬಂದಿ ಸೇರಿದಂತೆ ಒಟ್ಟು 39 ಮಂದಿ 2021ರಲ್ಲಿ ಇದುವರೆಗೂ ಕರ್ತವ್ಯದಲ್ಲಿರುವಾಗಲೇ ಪ್ರಾಣಕಳೆದುಕೊಂಡಿದ್ದಾರೆ. 2012ರಲ್ಲಿ ಈ ಸಂಖ್ಯೆಯು 140 ದಾಟಿತ್ತು. 350ಕ್ಕೂ ಅಧಿಕ ಪತ್ರಕರ್ತರು ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ವರದಿ ಹೇಳಿದೆ.

- Advertisement -

ಬಿಹಾರದ ರಾಜ್’ದಿಯೋ ಹಾಗೂ ಜಾರ್ಖಂಡ್’ನ ಅಕೀಲೇಶ್ ಪ್ರತಾಪ್ 24 ಗಂಟೆಯ ಒಳಗಾಗಿ ಸಮಾಜಘಾತುಕರಿಗೆ ಬಲಿಯಾದ ವಿಚಾರವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.  

2018ರಲ್ಲೂ ಭಾರತ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಆ ವರ್ಷ ಇರಾಕ್ ಹಾಗೂ ಸಿರಿಯಾ ದೇಶಗಳು ಮೊದಲೆರಡು ಸ್ಥಾನಗಳಲ್ಲಿದ್ದವು. ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಗ್ರೀಸ್, ಕೊಲಂಬಿಯಾ ಹಾಗೂ ಲೆಬನಾನ್ ದೇಶಗಳಲ್ಲೂ ಪತ್ರಕರ್ತರ ಹತ್ಯೆಯಾಗುತ್ತಿರುವುದನ್ನು ಸ್ಟಾಟಿಸ್ಟಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.

Join Whatsapp