ಹೊಸದಿಲ್ಲಿ: ಕೊಲ್ಲಲ್ಪಟ್ಟ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಲಖಿಂಪುರದಲ್ಲಿ ಇಂದು ರೈತರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ರೈತರ ಹುತಾತ್ಮ ದಿನವಾಗಿ ಆಚರಿಸುವ ಇಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿ ರೈತರು ಘೋಷಣೆಗಳನ್ನು ಕೂಗಲಿದ್ದಾರೆ. ಹುತಾತ್ಮ ರೈತರ ನೆನಪಿಗಾಗಿ ರಾತ್ರಿ 8 ಗಂಟೆಗೆ ದೀಪ ಬೆಳಗಿಸಲು ದೇಶದ ಎಲ್ಲ ಜನರಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ಅಕ್ಟೋಬರ್ 18 ರಂದು ರೈತರು ರೈಲು ತಡೆದು ಮುಷ್ಕರ ನಡೆಸಲಿದ್ದಾರೆ. ಕಾರು ಹರಿಸಿ ರೈತನನ್ನು ಕೊಂದ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ನನ್ನು ಇಂದು ವಿಚಾರಣೆ ನಡೆಸಲಾಗುವುದು. ನ್ಯಾಯಾಲಯ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು.