ದೆಹಲಿಗೆ ಹೋಗೋದು ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರನಾ, ಮುಸ್ಲಿಂನಲ್ಲಿ ಯಾರು ಸಹ ನಾಯಕರು ಇಲ್ವಾ ?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ , ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರನ್ನು ಒಂದೇ ಪಕ್ಷಕ್ಕೆ ತರುತ್ತೇನೆ ಎಂದು ಎಂ ಎಲ್ ಸಿ ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ‘’ಡಿ.ಕೆ.ಶಿವಕುಮಾರ್ ಸಹ ಒಂದೇ ಪಕ್ಷಕ್ಕೆ ತರುವಂತ ಪ್ರಯತ್ನ ಮಾಡುತ್ತೇನೆ. ಯಾವುದು ಆಗಲ್ಲ ಅಂತಿರೋ ಅದನ್ನು ಮಾಡಿ ತೋರಿಸ್ತಿನಿ. ದೇವೇಗೌಡರು ಪ್ರಧಾನಿ ಆಗ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ. ಅದನ್ನು ಮಾಡಿದವನು ನಾನು. ಕಾಂಗ್ರೆಸ್ ನಲ್ಲೂ ಅಲ್ಪಸಂಖ್ಯಾತರಿಗೆ ಸ್ಥಾನ ಮಾನವಿಲ್ಲ. ನನ್ನ ಮನೆಗೆ ಜನ ಬರ್ತಾರೆ ಹೊರತು ಇ.ಡಿ.ಯವರು ಬರಲ್ಲ . ದೆಹಲಿಗೆ ಹೋಗೋದು ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರನಾ ಮುಸ್ಲಿಂನಲ್ಲಿ ಯಾರು ಸಹ ನಾಯಕರು ಇಲ್ವಾ’’ ಎಂದು ಪ್ರಶ್ನಿಸಿದ್ದಾರೆ.