ಕೊನೆಗೂ ರೈತರಿಗೆ ಮಣಿದ ಮೋದಿ ಸರಕಾರ | ದೆಹಲಿ ಪ್ರವೇಶಿಸಿ, ಪ್ರತಿಭಟನೆ ನಡೆಸಲು ಅನುಮತಿ

Prasthutha|

ನವದೆಹಲಿ : ಕೊನೆಗೂ ರೈತರ ಹೋರಾಟಕ್ಕೆ ಮಣಿದಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ, ಪ್ರತಿಭಟನೆಯಲ್ಲಿ ನಿರತರಾದ ರೈತರಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ನೀಡಿದೆ. ಪಂಜಾಬ್, ಹರ್ಯಾಣ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳ ರೈತರ ‘ದೆಹಲಿ ಚಲೋ’ ಪಾದಯಾತ್ರೆ ಮತ್ತು ವಾಹನಜಾಥಾ ಪ್ರತಿಭಟನೆಗೆ ವಿವಿಧೆಡೆ ಅಡ್ಡಿ ಪಡಿಸಲಾಗಿತ್ತು. ಜಲಫಿರಂಗಿ, ಅಶ್ರುವಾಯು ಪ್ರಯೋಗ ಮಾಡಿ, ರೈತರನ್ನು ತಡೆಯುವ ಯತ್ನ ಮಾಡಲಾಗಿತ್ತು.

ಆದರೆ, ಯಾವುದಕ್ಕೂ ಹಿಮ್ಮೆಟ್ಟದೆ ಮುನ್ನಡೆದ ರೈತರ ಹೋರಾಟದ ತೀವ್ರತೆಗೆ ಮಣಿದಿರುವ ಕೇಂದ್ರ ಸರಕಾರ, ರೈತರನ್ನು ದೆಹಲಿ ಪ್ರವೇಶಿಸಿ, ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಿದೆ.

- Advertisement -

“ನಾವು ದೆಹಲಿಗೆ ಹೋಗಲು ಅನುಮತಿ ನೀಡಲಾಗಿದೆ’’ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ಹೇಳಿದ್ದಾರೆ. ಪಂಜಾಬ್ ಮುಖ್ಯ,ಮಂತ್ರಿ ಅಮರಿಂದರ್ ಸಿಂಗ್ ಕೇಂದ್ರ ಸರಕಾರ ಅನುಮತಿ ನೀಡಿರುವುದನ್ನು ಖಚಿತಪಡಿಸಿದ್ದಾರೆ.

- Advertisement -