ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ; ಎಲ್ಲೆಡೆ ನೀರವ ಮೌನ

Prasthutha|

► ಇಂದೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ?

- Advertisement -

ಬೆಂಗಳೂರು: ಕನ್ನಡ ಚಿತ್ರರಂಗದ ನಾಯಕ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರಾರ್ಥಿವ ಶರೀರದ ಅಂತಿಮದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾದ್ದು, ಅಭಿಮಾನಿಗಳು ‘ಪವರ್ ಸ್ಟಾರ್ ಗೆ ಜೈ…’, ‘ಅಪ್ಪು ಬಾಸ್ ಗೆ ಜೈ’, ‘ಜೂನಿಯರ್ ರಾಜ್ ಕುಮಾರ್ಗೆ ಜೈ’ ಮುಂತಾದ ಘೋಷಣೆ ಗಳನ್ನು ಕೂಗುತ್ತಾ ಪಾರ್ಥಿವ ಶರೀರಕ್ಕೆ ಕೆಲವರು ಕೈ ಮುಗಿದು ನಮಸ್ಕರಿಸುತ್ತಿದ್ದ ದೃಶ್ಯ ಕಂಡುಬಂತು.
ಕ್ರೀಡಾಂಗಣದ ಮಧ್ಯದಲ್ಲಿ ಶೆಡ್ ನಿರ್ಮಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕ್ರೀಡಾಂಗಣದ ದ್ವಾರದಿಂದಲೇ ಸಾಲಾಗಿ ಶೆಡ್ ಬಳಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಕೆಲ ಅಭಿಮಾನಿಗಳು ಏಕಾಏಕಿ ನುಗ್ಗಿದ್ದರಿಂದ ನೂಕುನುಗ್ಗಲು ಉಂಟಾಯಿತು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ನಿಗ್ರಹಿಸಿದರು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದಂತೆ ಅಭಿಮಾನಿಗಳನ್ನು ಸಾಲಿನಲ್ಲಿ ಕ್ರೀಡಾಂಗಣದ ಒಳಗೆ ಕಳುಹಿಸಲಾಯಿತು. ಜನರ ಸಾಲು ಸಮಯ ಕಳೆದಂತೆ ದೊಡ್ಡದಾಗುತ್ತಲೇ ಇತ್ತು. ಪುನೀತ್ ರಾಜ್ಕುಮಾರ್ ಪರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಪಾರ್ಥಿವ ಶರೀರದ ಫೋಟೊ ಹಾಗೂ ವಿಡಿಯೊ ಸೆರೆ ಹಿಡಿಯಲು ಅಭಿಮಾನಿಗಳು ಮುಗಿಬಿದ್ದರು. ಕೆಲವರು ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡು ನೆಚ್ಚಿನ ನಟನಿಗೆ ವಿದಾಯ ಕೋರಿದರು.

- Advertisement -


ನಿನ್ನೆ ರಾತ್ರಿ 7 ಗಂಟೆಗೆ ಕಂಠೀರವ ಕ್ರೀಡಾಂಗಣಕ್ಕೆ ಪುನೀತ್ ಅವರ ಪಾರ್ಥಿವ ಶರೀರವನ್ನು ತರುತ್ತಲೇ ಅಭಿಮಾನಿಗಳು ದುಃಖದ ಕಟ್ಟೆ ಸ್ಫೋಟಗೊಂಡತ್ತು. ಅಪ್ಪೂ, ಪುನೀತಣ್ಣ, ಸಾರ್ ಮತ್ತೆ ಹುಟ್ಟಿ ಬನ್ನಿ ಹೀಗೆ ಘೋಷಣಗಳು ಮುಗಿಲು ಮುಟ್ಟಿದ್ದವು. ನೂಕುನುಗ್ಗಲಲ್ಲೇ ಸಾಗಿ ಅಪ್ಪುಗೆ ಅಂತಿಮ ನಮನ ಸಲ್ಲಿಸಿದರು.


ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಾವೇರಿ, ಹುಬ್ಬಳ್ಳಿಯಿಂದ ರಿಸರ್ವ್ ಪೊಲೀಸರನ್ನು ಕರೆತಂದು ಇಲ್ಲಿ ನಿಯೋಜನೆ ಮಾಡಲಾಗಿದೆ. ಪುನೀತ್ ಅವರ ಪುತ್ರಿ ಅಮೆರಿಕದಿಂದ ಹೊರಟಿದ್ದು, ಇಂದು ಬೆಂಗಳೂರು ತಲುಪುವ ಸಾಧ್ಯತೆ ಇದೆ. ಇಂದು ಆಗಮಿಸಿದರೆ ಇಂದೇ ಅಂತ್ಯಕ್ರಿಯೆ ನಡೆಸಲು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Join Whatsapp