ಮಂಗಳೂರು: ಖ್ಯಾತ ವಕೀಲರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Prasthutha|

ಮಂಗಳೂರು: ಖ್ಯಾತ ನ್ಯಾಯವಾದಿಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಮಂಗಳೂರಿನಲ್ಲಿ ನಡೆದಿದೆ.

- Advertisement -

ನಗರದ ಖ್ಯಾತ ನ್ಯಾಯವಾದಿ ಬಿ.ಹರೀಶ್ ಆಚಾರ್ಯ (60) ಅವರ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಬೆಳಗ್ಗೆ ನಗರದ ಬಿಜೈ ಬಾರಬೈಲ್‌ನ ಅವರ ಮನೆಯಲ್ಲಿ ಪತ್ತೆಯಾಗಿದ್ದು ಅವರ ರಕ್ತ ಸಂಬಂಧಿಕರಿದ್ದರೆ ಸಂಪರ್ಕಿಸುವಂತೆ ಉರ್ವ ಠಾಣಾ (0824-2220822/2220800) ಪೊಲೀಸರು ತಿಳಿಸಿದ್ದಾರೆ.

ಹರೀಶ್ ಆಚಾರ್ಯ ಅವರು ಶುಕ್ರವಾರದಂದು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದರು. ಜು.9ರ ಬೆಳಗ್ಗೆ 10ರಿಂದ ಜು.11ರ ಬೆಳಗ್ಗೆ 11ರ ನಡುವೆ ಮನೆಯಲ್ಲಿರುವ ಸಮಯ ಹೃದಯಾಘಾತ ಅಥವಾ ಆಕಸ್ಮಿಕವಾಗಿ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.