ಫೈಝಾನ್​ ಅನ್ಸಾರಿಯನ್ನು ಮದುವೆಯಾದ ಖ್ಯಾತ ನಟಿ ಗೆಹನಾ ವಸಿಷ್ಠ್​

Prasthutha|

- Advertisement -

ನವದೆಹಲಿ: ಪ್ರಿಯಕರ ಫೈಝಾನ್​ ಅನ್ಸಾರಿ ಜೊತೆ ಖ್ಯಾತ ನಟಿ ಗೆಹನಾ ವಸಿಷ್ಠ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಫೈಝಾನ್​ ಅನ್ಸಾರಿ ಮತ್ತು ಗೆಹನಾ ವಸಿಷ್ಠ್​ ಅವರು ಬಹುಕಾಲದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದು ಅವರ ಸ್ವಂತ ನಿರ್ಧಾರ ಎಂದು ಹೇಳಲಾಗುತ್ತಿದೆ.

- Advertisement -

ಸೋಶಿಯಲ್​ ಮೀಡಿಯಾ ಇನ್​ ಫ್ಲೂಯನ್ಸರ್​ ಆಗಿ ಫೈಝಾನ್​ ಅನ್ಸಾರಿ ಗುರುತಿಸಿಕೊಂಡಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ.

ಗೆಹನಾ ವಸಿಷ್ಠ್​ ಅವರ ಮೂಲ ಹೆಸರು ವಂದನಾ ತಿವಾರಿ. ಮೂಲತಃ ಚತ್ತೀಸ್​ ಗಡದವರು. ಮಾಡೆಲ್​ ಆಗಿ ಜನಪ್ರಿಯತೆ ಪಡೆದ ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ

Join Whatsapp