ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ನಿಧನ

Prasthutha|

ಮುಂಬೈ: ಬಾಲಿವುಡ್ ನಟ ಮಂಗಲ್ ಧಿಲ್ಲೋನ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

- Advertisement -

ಹಲವು ವರ್ಷಗಳಿಂದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಆಸ್ಪತ್ರೆಯ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ.

ಕಿರುತೆರೆ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಂಗಲ್ ಪ್ಯಾರ್ ಕಾ ದೇವತಾ, ವಿಶ್ವಾತ್ಮ, ಟ್ರೈನ್ ಟು ಪಾಕಿಸ್ತಾನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1988ರಲ್ಲಿ ತೆರೆಕಂಡ ಖೋನ್ ಭಾರಿ ಮಾಂಗ್ ಸಿನಿಮಾದಲ್ಲಿ ಮಾಡಿದ್ದ ವಕೀಲ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

Join Whatsapp