ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಸುಳ್ಳು ವರದಿ : ಉಕ್ರೇನಿನಲ್ಲಿ LIVEನಲ್ಲೇ ಮುಖಭಂಗಕ್ಕೀಡಾದ ‘ಆಜ್ ತಕ್’ ಚಾನೆಲ್ !

Prasthutha|

ದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಸಮರವು ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಬೆಚ್ಚಿ ಬೀಳಿಸಿದೆ. ಈ ನಡುವೆ ಯುದ್ಧ ಪೀಡಿತ ಉಕ್ರೇನಿನ ಗಡಿ ಭಾಗದಲ್ಲಿ ಭಾರತಕ್ಕೆ ತೆರಳಲು ಕಷ್ಟ ಪಡುತ್ತಿರುವ ವಿದ್ಯಾರ್ಥಿಗಳ ಮುಂದೆಯೇ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿದ್ದ ‘ಆಜ್ ತಕ್’ ಚಾನೆಲ್ ಲೈವ್ ವರದಿಗಾರಿಕೆಯಲ್ಲೇ ಭಾರತೀಯ ವಿದ್ಯಾರ್ಥಿಗಳು ಮಧ್ಯೆ ಬಂದು ಇವರು ಹೇಳುತ್ತಿರುವುದೆಲ್ಲಾ ಸುಳ್ಳು ಎನ್ನುತ್ತಾ ಭಾರತೀಯ ಸುದ್ದಿ ಚಾನೆಲ್ ಗಳ ಸುಳ್ಳನ್ನು ಬಹಿರಂಗಪಡಿಸಿದ್ದಾರೆ.

- Advertisement -

ಬಿಜೆಪಿ ಹಾಗೂ ಮೋದಿ ಪರ ಸುಳ್ಳು ಸುದ್ದಿಗಳ ಪ್ರಸಾರಕ್ಕೆ ಕುಖ್ಯಾತಿ ಪಡೆದಿರುವ ‘ಆಜ್ ತಕ್’ ಇದೀಗ ಯುದ್ಧ ಸಮಯದಲ್ಲೂ ತನ್ನ ಎಂದಿನ ಚಾಳಿ ಪ್ರದರ್ಶಿಸಲು ಹೋಗಿ ಮುಖಭಂಗಕ್ಕೀಡಾಗಿದೆ. ಇಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಳಿಸಲಾಗುತ್ತಿದೆ ಎಂದು ವರದಿ ಮಾಡುತ್ತಿದ್ದ ವರದಿಗಾರನ ಕ್ಯಾಮರಾ ಮುಂದೆ ಬಂದ ವಿದ್ಯಾರ್ಥಿಗಳಿಬ್ಬರು “ ಇವರು ಹೇಳುತ್ತಿರುವುದು ಸುಳ್ಳು, ಇಲ್ಲಿ ನಮ್ಮ ರಕ್ಷಣೆಗೆ ಯಾರೂ ಬಂದಿಲ್ಲ” ಎನ್ನುತ್ತಾ ಅಡ್ಡ ಬರುತ್ತಾರೆ. ಈ ವೇಳೆ ವರದಿಗಾರ ತನ್ನ ಕರ್ತವ್ಯ ನಿರ್ವಹನೆಗೆ ಅವಕಾಶ ಕೊಡಿ ಎನ್ನುತ್ತಾನೆ. ಆದರೂ ಆ ವಿದ್ಯಾರ್ಥಿಗಳು ಯುದ್ಧಗ್ರಸ್ತ ಭೂಮಿಯಲ್ಲಿ ಭಾರತೀಯ ವಿದ್ಯಾರ್ಥಿಗಳೂ ಪಡುತ್ತಿರುವ ಸಂಕಷ್ಟಗಳ ಪ್ರತಿನಿಧಿಯಾಗಿ ಲೈವ್ ನಲ್ಲೇ ಕ್ಯಾಮರಾ ಮುಂದೆ ಭಾರತ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಇದೀಗಾಗಲೇ ಹಲವು ಭಾರತೀಯ ವಿದ್ಯಾರ್ಥಿಗಳು ತಾವು ಪಡುತ್ತಿರುವ ಸಂಕಷ್ಟಗಳ ಕುರಿತಂತೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಈ ನಡುವೆ ಪ್ರಧಾನಿ ಮೋದಿ ಮಾತ್ರ ಉತ್ತರ ಪ್ರದೇಶದ ಚುನಾವಣಾ ರಾಲಿಗಳಲ್ಲಿ, “ ಭಾರತ ಶಕ್ತಿಯುತವಾಗಿದೆ. ಈ ಕಾರಣದಿಂದಾಗಿ ನಮಗೆ ಸುರಕ್ಷಿತವಾಗಿ ನಮ್ಮ ವಿದ್ಯಾರ್ಥಿಗಳನ್ನು ಉಕ್ರೇನಿನಿಂದ ಭಾರತಕ್ಕೆ ಮರಳಿ ಕರೆ ತರಲು ಸಾಧ್ಯವಾಗಿದೆ” ಎಂದು ಯಾವ ನಾಚಿಕೆಯೂ ಇಲ್ಲದೆ ಭಾಷಣ ಬಿಗಿಯುತ್ತಿದ್ದಾರೆ.ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Join Whatsapp