ಭಾರತದ ಸಾಮರ್ಥ್ಯದಿಂದ ಸಂತ್ರಸ್ತ ವಿದ್ಯಾರ್ಥಿಗಳನ್ನು ಉಕ್ರೇನ್ ನಿಂದ ಸ್ಥಳಾಂತರಿಸಲು ಸಾಧ್ಯವಾಗಿದೆ: ಉ.ಪ್ರ ಚುನಾವಣಾ ರ‍್ಯಾಲಿ ವೇಳೆ ಮೋದಿ

Prasthutha|

ಮೋದಿಯ ಹಾಸ್ಯಾಸ್ಪದ ಹೇಳಿಕೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ

- Advertisement -

ಲಕ್ನೋ: ಭಾತರದ ಸಾಮರ್ಥ್ಯದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿರುವ ಸಂತ್ರಸ್ತ ಭಾರತೀಯರನ್ನು ಸ್ಥಳಾಂತರಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಉತ್ತರ ಪ್ರದೇಶದ ಸೋನ್ ಭದ್ರ ಎಂಬಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉಕ್ರೇನ್ ನಿಂದ ಸಂತ್ರಸ್ತರನ್ನು ಕರೆತರಲು ಎಲ್ಲಾ ವಿಧದ ಪ್ರಯತ್ನಗಳನ್ನು ಮುಂದುವರಿಸಲಿದ್ದು, ಕೇಂದ್ರ ಸರ್ಕಾರ ಇದಕ್ಕೆ ಬೇಕಾದ ಸಾಮರ್ಥವನ್ನು ಹೊಂದಿದೆ ಎಂದು ಮೋದಿ ತಿಳಿಸಿರುವ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ನೆಟ್ಟಿಗರು, ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಆತಂತ್ರರಾಗಿರುವಾಗ ಪ್ರಧಾನಿ ಮೋದಿಯಿಂದ ಈ ರೀತಿಯ ಹಾಸ್ಯಾಸ್ಪದ ಹೇಳಿಕೆಗೆ ಕಿಡಿಕಾರಿದ್ದಾರೆ.

ಪ್ರಧಾನಿಯ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅನಿವಾಸಿ ಕಾಂಗ್ರೆಸ್ ಸಮಿತಿ, ಉಕ್ರೇನ್ ಪರಿಸ್ಥಿತಿಯನ್ನು ಅವಲೋಕಿಸುವ ಸಲುವಾಗಿ ರೊಮಾನಿಯಾ ಗಡಿಯಲ್ಲಿನ ಗಂಭೀರ ಸ್ಥಿತಿಯ ವೀಡಿಯೋವೊಂದನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಭಾರತೀಯ ವಿದ್ಯಾರ್ಥಿಗಳ ಅತಂತ್ರ ಬದುಕು ಅನಾವರಣಗೊಂಡಂತಾಗಿದೆ.

ಪ್ರಧಾನಿಯ ಈ ರೀತಿಯ ಹೇಳಿಕೆಗೆ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿ ಸಂಘಟನೆ ಕೆ.ವಿ.ಎಸ್. ಸಂಚಾಲಕ ಸರೋವರ್ ಬೆಂಕಿಕೆರೆ ಮಾತನಾಡಿ, ಪ್ರಧಾನಿಗೆ ನಾಚಿಕೆ ಎಂಬುದಿಲ್ಲ. ಭಾರತ ಸರ್ಕಾರದ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಲಕ್ಷಾಂತರ ಭಾರತೀಯರನ್ನು ತಾಯ್ನಾಡಿಗೆ ಕರೆದು ತಂದಿತ್ತು. ಅಂದಿನ ಸರ್ಕಾರ ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಿಸಿರಲಿಲ್ಲ. ಭಾರತೀಯರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆಂದು ತಿಳಿದಿದ್ದರೂ ಕೂಡ ಅವರ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲದೆ ಚುನಾವಣಾ ಅಸ್ತ್ರವನ್ನಾಗಿಸಿರುವುದು ಹೊಣೆಗೇಡಿತನದ ಪರಮಾವಧಿ ಎಂದು ಅವರು ಕಿಡಿಕಾರಿದ್ದಾರೆ.

Join Whatsapp