ನಾಗಾಸಾಧು ವೇಷದಲ್ಲಿ ಬಂದು ವ್ಯಕ್ತಿಯೊಬ್ಬರ ಕೈಯಲ್ಲಿನ ಉಂಗುರ ದೋಚಿ ಪರಾರಿ

Prasthutha|

ತುಮಕೂರು: ನಾಗಾಸಾಧುಗಳ ಸೋಗಿನಲ್ಲಿ ಬಂದು ಸಿನಿಮೀಯ ಸ್ಟೈಲಿನಲ್ಲಿ ಭಕ್ತರೊಬ್ಬರಿಗೆ ಮಂಕು ಬೂದಿ ಎರಚಿ ಚಿನ್ನದ ಉಂಗುರದೊಂದಿಗೆ ಪರಾರಿಯಾಗಿರುವ ಘಟನೆ ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ.

- Advertisement -

ನಕಲಿ ನಾಗಾ ಸಾಧುಗಳು ಭಕ್ತರೊಬ್ಬರಿಗೆ ಕೈಯಲ್ಲಿ ರುದ್ರಾಕ್ಷಿ ಕೊಟ್ಟು ಧ್ಯಾನ ಮಾಡುವಂತೆ ಹೇಳಿ ಆತನ ಉಂಗುರ ಕದ್ದು ಓಡಿ ಹೋಗಿದ್ದಾರೆ. ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿರುವ ಮಲ್ನಾಡ್ ಸ್ಟುಡಿಯೋ ಮಾಲೀಕ ಚಂದ್ರುವಿನ ಕೈಯಲ್ಲಿ ರುದ್ರಾಕ್ಷಿ ಇಟ್ಟು ಎರಡೂ ಕೈಯನ್ನು ಬಲವಾಗಿ ಹಿಡಿದು ಮಂತ್ರ ಹೇಳಿದ್ದಾರೆ. ಮಂತ್ರ ಹೇಳಿಸುವ ನೆಪದಲ್ಲಿ ಬೆರಳಲ್ಲಿದ್ದ ಉಂಗುರ ಲಪಟಾಯಿಸಿದ್ದು, ಬಳಿಕ ಎರಡು ನಿಮಿಷ ಧ್ಯಾನ ಮಾಡಿ ಎಂದು ಹೇಳಿ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಧ್ಯಾನದಿಂದ ಹೊರಬಂದು ನೋಡಿದಾಗ ಬಲಗೈಯಲ್ಲಿದ್ದ ಉಂಗುರ ದೋಚಿಕೊಂಡು ಹೋಗಿರುವುದು ಚಂದ್ರು ಗಮನಕ್ಕೆ ಬಂದಿದೆ.

ಕೂಡಲೇ ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟು ಮೂವರು ನಾಗಸಾಧು ವೇಷದಲ್ಲಿ ತಿರುಗಾಡುತ್ತಿದ್ದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.



Join Whatsapp