KSRTC ಯಲ್ಲಿ ಉದ್ಯೋಗಾವಕಾಶದ ನಕಲಿ ಜಾಹೀರಾತು; ದಿನಪತ್ರಿಕೆಯೊಂದರ ವಿರುದ್ಧ ದೂರು ದಾಖಲು

Prasthutha|

ಬೆಂಗಳೂರು: KSRTC ಸಂಸ್ಥೆಯಲ್ಲಿ ಉದ್ಯೋಗಾವಕಾಶ ಇರುವುದಾಗಿ ನಕಲಿ ಜಾಹೀರಾತು ಪ್ರಕಟಿಸಿದ ಬಗ್ಗೆ ದಿನಪತ್ರಿಕೆಯೊಂದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ದೂರು ನೀಡಲಾಗಿದೆ.

- Advertisement -


ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ KSRTC ಸಂಸ್ಥೆಯ ಹೆಸರಿನಲ್ಲಿ ನಕಲಿ ನೇಮಕಾತಿಯ ಜಾಹೀರಾತು ನೀಡಲಾಗಿದೆ ಎಂದು ಆರೋಪಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಜಿ.ಕೆ. ಮರಿಗೌಡ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಹಾಗೂ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು 650 ಚಾಲಕರು ಬೇಕಾಗಿದ್ದಾರೆ. ಖಾಯಂ ನೌಕರಿ ಇದಾಗಿದ್ದು, ಆರಂಭದಲ್ಲಿ ಪ್ರತಿಯೊಬ್ಬ ಆಕಾಂಕ್ಷಿಯೂ ₹25000 ತುಂಬಬೇಕು. ನಂತರ ಅದನ್ನು ವಾಪಸ್ ನೀಡಲಾಗುವುದು ಎಂದು ಬೆಂಗಳೂರಿನ ಕೆ.ಆರ್‌. ಪುರಂನ ಸನ್ಮಾರ್ಗ ಮಾನವ ಸಂಪನ್ಮೂಲ ಏಜೆನ್ಸಿ ಹೆಸರಿನಲ್ಲಿ ನವೆಂಬರ್ 11ರಂದು ನೇಮಕಾತಿ ಬಗ್ಗೆ ಜಾಹೀರಾತು ನೀಡಲಾಗಿದೆ.

- Advertisement -


ಸಂಸ್ಥೆಯಿಂದ ಅಧಿಕೃತವಾಗಿ ಯಾವುದೇ ನೇಮಕಾತಿ ಆದೇಶ ಹೊರಡಿಸಿಲ್ಲ. ಕೆಲಸದ ಆಮಿಷ ಒಡ್ಡಿ ಹಣ ಸಂಗ್ರಹಣೆ ಮಾಡಿ ವಂಚಿಸುವ ಉದ್ದೇಶದಿಂದ ಜಾಹೀರಾತು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಬಗ್ಗೆ ಎಫ್‌ಐಆರ್ ದಾಖಲಿಸಿರುವ ದೊಡ್ಡಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



Join Whatsapp