ಕತಾರ್ ತಲುಪಿದ ಫಿಫಾ ಪುಟ್ಬಾಲ್ ವಿಶ್ವಕಪ್ ಟ್ರೋಫಿ

Prasthutha|

ದೋಹಾ: ವಿಶ್ವಕಪ್ ಪುಟ್ಬಾಲ್’ಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಫಿಫಾ ವಿಶ್ವಕಪ್ ಟ್ರೋಫಿ ಕತಾರ್ ತಲುಪಿದೆ. ಆಸ್ಪೈರ್ ಪಾರ್ಕ್’ನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಕತಾರ್ ಪುಟ್ಬಾಲ್ ಅಭಿಮಾನಿಗಳಿಗೆ ಟ್ರೋಫಿಯನ್ನು ನೇರವಾಗಿ ನೋಡುವ ಅವಕಾಶ ಲಭಿಸಲಿದೆ.

- Advertisement -

ಪ್ರಸಿದ್ಧ ಈ ಟ್ರೋಫಿಯು ಇತ್ತೀಚಿನ ತಿಂಗಳಿನಲ್ಲಿ ಜಾಗತಿಕ ಪ್ರವಾಸವನ್ನು ಕೈಗೊಂಡಿದ್ದು, ಫಿಫಾ ವಿಶ್ವಕಪ್ – ಕತಾರ್ 2022ಗೆ ಅರ್ಹತೆ ಪಡೆದ ಪ್ರತಿಯೊಂದು ದೇಶಕ್ಕೂ ಈ ಟ್ರೋಫಿಯನ್ನು ಕೊಂಡೊಯ್ಯಲಾಗಿದೆ. ಪಂದ್ಯಾವಳಿಯ ಪೂರ್ವಭಾವಿಯಾಗಿ ಟ್ರೋಫಿಯು 51 ದೇಶಗಳು ಮತ್ತು ಪ್ರಾಂತ್ಯಗಳಿಗೆ ಭೇಟಿಕೊಟ್ಟಿದೆ.

ಮಂಗಳವಾರ ಸಂಜೆ 4 ಗಂಟೆಗೆ ಕತಾರ್’ನಲ್ಲಿರುವ ಆಸ್ಪೈರ್ ಪಾರ್ಕ್’ನಲ್ಲಿ ಟ್ರೋಫಿಯನ್ನು ನೋಡಲು ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಕಾರ್ಯಕ್ರಮವನ್ನು ಸ್ಥಳೀಯ ಹಾಸ್ಯ ಕಲಾವಿದ ಹಮದ್ ಅಲ್ ಅಮರಿ ನಿರೂಪಿಸಲಿದ್ದಾರೆ. ಪಂದ್ಯಾಕೂಟವು ನವೆಂಬರ್ 20ರಿಂದ ಡಿಸೆಂಬರ್ 18 ರವರೆಗೆ ಎಂಟು ಕ್ರೀಡಾಂಗಣದಲ್ಲಿ ನಡೆಯಲಿದೆ.

Join Whatsapp