ಕತ್ತೆ ಲದ್ದಿ, ಒಣಹುಲ್ಲಿನ ಹುಡಿ, ಆಸಿಡ್ ಬಳಸಿ ಮಸಾಲ ಪದಾರ್ಥ ತಯಾರಿಕೆ | ಯೋಗಿ ಆದಿತ್ಯನಾಥ್ ಸಂಘಟನೆಯ ಮುಖಂಡನ ಬಂಧನ

Prasthutha|

ಆಗ್ರಾ : ನೀವು ದಿನ ನಿತ್ಯ ಬಳಕೆಗೆ ಬಳಸುವ ನಿಮ್ಮ ಮಸಾಲ ಪುಡಿ ಯಾವುದರಿಂದ ತಯಾರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳಿತು. ಉತ್ತರ ಪ್ರದೇಶದ ಹಥರಾಸ್ ನಲ್ಲಿ ಕತ್ತೆಯ ಲದ್ದಿ (ಸೆಗಣಿ), ಆಸಿಡ್ ಮತ್ತು ಒಣಹುಲ್ಲಿನಿಂದ ಮಸಾಲೆ ಪದಾರ್ಥಗಳನ್ನು ತಯಾರಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ.

- Advertisement -

ಈ ಜಾಲದ ರೂವಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2002ರಲ್ಲಿ ಸ್ಥಾಪಿಸಿದ್ದ ಹಿಂದೂ ಯುವ ವಾಹಿನಿಯ ಮಂಡಲ ಸಹ ಪ್ರಭಾರಿ ಅನೂಪ್ ವಾರ್ಶ್ನೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಅನೂಪ್ ನನ್ನು ಬಂಧಿಸಲಾಗಿದೆ.

ಪೊಲೀಸ್ ದಾಳಿಯ ವೇಳೆ ಕೆಂಪು ಮೆಣಸಿನ ಹುಡಿ, ಗರಂ ಮಸಾಲ ಮಿಶ್ರಣ ಮತ್ತು ಅರಿಶಿಣ ಜೊತೆಗೆ ಮಸಾಲದೊಂದಿಗೆ ಮಿಶ್ರಣ ಮಾಡಲು ಕತ್ತೆ ಲದ್ದಿ, ಒಣಹುಲ್ಲು, ತಿನ್ನಬಾರದ ಬಣ್ಣಗಳು, ಆಸಿಡ್ ಗಳು ಪತ್ತೆಯಾಗಿವೆ.

- Advertisement -

27 ಮಾದರಿಯ ಮಸಾಲ ಪುಡಿಗಳನ್ನು ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. 300 ಕೆ.ಜಿಗೂ ಹೆಚ್ಚು ಮಸಾಲೆ ಪದಾರ್ಥವನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಮಸಾಲೆ ಪುಡಿಗಳಿಗೆ ಕತ್ತೆ ಲದ್ದಿ, ಒಣಹುಲ್ಲು, ಆಸಿಡ್ ಮಿಶ್ರಣ ಮಾಡಿ ಬಳಸಲಾಗುತಿತ್ತು.

ಕಾರ್ಖಾನೆಯ ವಿರುದ್ಧ ದೂರುಗಳು ಕೇಳಿಬಂದಿದ್ದುರಿಂದ ಪೊಲೀಸರು ದಾಳಿ ನಡೆಸಿದ್ದರು.  



Join Whatsapp