ನವದೆಹಲಿ : ತನ್ನ ಭದ್ರತಾ ತಂಡದ ಎಚ್ಚರಿಕೆಯ ಹೊರತಾಗಿಯೂ, ಉದ್ಯಮ ಮತ್ತು ಸುರಕ್ಷತೆಯ ಕಾರಣಕ್ಕಾಗಿ ಫೇಸ್ ಬುಕ್ ಭಾರತದಲ್ಲಿ ಭಜರಂಗ ದಳದ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ಹಿಂದೇಟು ಹಾಕಿತ್ತು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ಆಡಳಿತಾರೂಢ ಬಿಜೆಪಿ ಬೆಂಬಲಿಗ ಸಂಘಟನೆ, ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಭಜರಂಗ ದಳ ‘ಅಪಾಯಕಾರಿ ಸಂಘಟನೆ’ ಎಂದು ತನ್ನ ಆಂತರಿಕ ಭದ್ರತಾ ತಂಡ ಎಚ್ಚರಿಕೆ ನೀಡಿದ್ದರೂ, ರಾಜಕೀಯ ಹಾಗೂ ಉದ್ಯಮ ಮತ್ತು ತನ್ನ ನೌಕರರ ಭದ್ರತೆಯ ಕಾರಣಕ್ಕಾಗಿ ಆ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಫೇಸ್ ಬುಕ್ ಹಿಂದೆ ಸರಿದಿತ್ತು ಎಂದು ವರದಿ ತಿಳಿಸಿದೆ.
ಫೇಸ್ ಬುಕ್ ಎಕ್ಸಿಕ್ಯೂಟಿವ್ ಅಂಖಿ ದಾಸ್, ಬಿಜೆಪಿ ನಾಯಕರ ಪರವಾಗಿ ಲಾಬಿ ನಡೆಸಿದ್ದ ಬಗ್ಗೆ ಈ ಹಿಂದೆಯೂ ವರದಿಗಳಾಗಿದ್ದವು.