‘ಬಿಜೆಪಿ ನಾಯಕರ ನಕಲಿ ಖಾತೆಗಳಿಗೆ ಕೊಕ್ ನೀಡದ ಫೇಸ್‌ಬುಕ್’: ಮಾಜಿ ಉದ್ಯೋಗಿಯಿಂದ ಬಹಿರಂಗ!

Prasthutha|

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ನಕಲಿ ಖಾತೆಗಳನ್ನು ಅಳಿಸುವಲ್ಲಿ ತಾರತಮ್ಯ ಮಾಡಿದ್ದು, ಬಿಜೆಪಿ ನಾಯಕರ ನಕಲಿ ಖಾತೆಗಳನ್ನು ಫೇಸ್‌ಬುಕ್ ತೆಗೆದುಹಾಕಲಿಲ್ಲ ಎಂದು ಫೇಸ್ ಬುಕ್ ನ ಮಾಜಿ ಡೇಟಾ ವಿಜ್ಞಾನಿಯೊಬ್ಬರು ಬಹಿರಂಗಪಡಿಸಿದ್ದಾರೆ.

- Advertisement -

ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ನಾಯಕರ ನಕಲಿ ಫೇಸ್‌ಬುಕ್ ಖಾತೆಗಳು ಗಮನಕ್ಕೆ ಬಂದಿದ್ದವು. ಆದರೆ ನಕಲಿ ಖಾತೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಫೇಸ್ ಬುಕ್ ವಿಭಿನ್ನ ನಿಲುವುಗಳನ್ನು ತಳೆದಿರುವುದನ್ನು ವಿಸಿಲ್ ಬ್ಲೋವರ್ ಸೋಫಿ ಶಾಂಗ್ ಬಹಿರಂಗಪಡಿಸಿದ್ದಾರೆ.

ಬಿಜೆಪಿ,ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಚುನಾವಣೆಯಲ್ಲಿ ಪ್ರಭಾವ ಬೀರಲು ನಕಲಿ ಖಾತೆಗಳನ್ನು ಬಳಸಿದ್ದವು. ಆದರೆ,ಬಿಜೆಪಿ ನಾಯಕರಿಗೆ ಸಂಬಂಧಿಸಿದ ನಕಲಿ ಖಾತೆಗಳನ್ನು ಮಾತ್ರ ಫೇಸ್‌ಬುಕ್ ಸ್ಥಗಿತಗೊಳಿಸಿಲ್ಲ ಎಂದು ಅವರು ಹೇಳಿದ್ದಾರೆ.

- Advertisement -

‘ಐದು ನೆಟ್ ವರ್ಕ್ ಗಳ ಪೈಕಿ ನಾಲ್ಕರ ವಿರುದ್ಧ ನಾವು ಕ್ರಮ ಕೈಗೊಂಡಿದ್ದೆವು. ಆದರೆ ಐದನೆಯದು ಲೋಕಸಭಾ ಸಂಸದರೂ ಆಗಿದ್ದ ಬಿಜೆಪಿ ನಾಯಕರೊಬ್ಬರ ನಕಲಿ ಖಾತೆ ಎಂದು ತಿಳಿಯಿತು. ಅದಕ್ಕಾಗಿಯೇ ನಮಗೆ ಆ ನೆಟ್‌ವರ್ಕ್ ಅನ್ನು ಸ್ಥಗಿತಗೊಳಿಸಲು ಸಾಧ್ಯವಾಗಲಿಲ್ಲ’ ಎಂದು ಸೋಫಿ ತಿಳಿಸಿದ್ದಾರೆ.

ಫೇಸ್‌ಬುಕ್‌ನ ನೈಜ ಉದ್ದೇಶ ಪ್ರಜಾಪ್ರಭುತ್ವವನ್ನು ರಕ್ಷಿಸುವುದಲ್ಲ ಬದಲಿಗೆ ಹಣ ಗಳಿಸುವುದು ಎಂದು ಅವರು ಆರೋಪಿಸಿದ್ದಾರೆ.
ಮೂರು ವರ್ಷಗಳ ಕಾಲ ಫೇಸ್‌ಬುಕ್‌ನಲ್ಲಿ ಡೇಟಾ ವಿಶ್ಲೇಷಕರಾಗಿ ಸೇವೆ ಸಲ್ಲಿಸಿದ ಸೋಫಿ 2020 ರಲ್ಲಿ ಕಂಪನಿಯನ್ನು ತೊರೆದಿದ್ದರು.

Join Whatsapp