ಉತ್ತರಾಖಂಡ: ಭೀಕರ ಹಿಮಪಾತಕ್ಕೆ 11 ಚಾರಣಿಗರ ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

Prasthutha|

ನವದೆಹಲಿ: ಉತ್ತರಾಖಂಡದ ಲಮ್ಖಗಾದಲ್ಲಿ ಭೀಕರ ಹಿಮಪಾತಕ್ಕೆ ಬಲಿಯಾದ 11 ಮಂದಿಯ ಶವಗಳನ್ನು ಮೇಲೆತ್ತಲಾಗಿದೆ. ಮಾತ್ರವಲ್ಲ ಇನ್ನೂ ಹಲವರು ಈ ದುರಂತಕ್ಕೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

- Advertisement -

ಉತ್ತರಾಖಂಡದಲ್ಲಿ 17 ಸಾವಿರ ಅಡಿ ಎತ್ತರದಲ್ಲಿ 17 ಮಂದಿ ಚಾರಣಿಗರು, ಪ್ರವಾಸಿಗರು, ಹಮಾಲರು ಮತ್ತು ಮಾರ್ಗದರ್ಶಕರು ಸೇರಿದಂತೆ ಹಲವು ಮಂದಿ ಅಕ್ಟೋಬರ್ 18 ರಂದು ಭಾರೀ ಹಿಮಪಾತ ಮತ್ತು ಹವಮಾನ ವೈಪರೀತ್ಯದಿಂದಾರಿ ದಾರಿ ತಪ್ಪಿದ್ದರು.
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯನ್ನು ಸಂಪರ್ಕಿಸುವ ಪ್ರದೇಶದಿಂದ ಈಗಾಗಲೇ 11 ಶವಗಳನ್ನು ಮೇಲೆತ್ತಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅಕ್ಟೋಬರ್ 20 ರಂದು ಸ್ಥಳೀಯ ಅಧಿಕಾರಿ ನೀಡಿದ ಮಾಹಿತಿಯನ್ವಯ ಭಾರತೀಯ ವಾಯಪಡೆ, ಸೇನೆಯ ಹೆಲಿಕಾಪ್ಟರ್ ಮೂಲಕ ಪ್ರವಾಸಿ ಗಿರಿಧಾಮವಾದ ಹರ್ಸಿಲ್ ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

- Advertisement -

ರಕ್ಷಣಾ ತಂಡಗಳು ಸ್ಥಳದಲ್ಲಿ ಪತ್ತೆಯಾದ ಶವಗಳನ್ನು ಪೊಲೀಸರಿಗೆ ಹಸ್ತಾಂತರಿಸಿವೆ ಮತ್ತು ಬದುಕುಳಿದವರನ್ನು ಉತ್ತರ ಕಾಶಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

Join Whatsapp