ತಾಲಿಬಾನ್ ಸಂಬಂಧಿತ ಬರಹಗಳನ್ನು ನಿಷೇಧಿಸಿದ ಫೇಸ್ ಬುಕ್

Prasthutha|

ಲಂಡನ್: ಫೇಸ್‌ ಬುಕ್ ಸಂಸ್ಥೆಯು ತಾಲಿಬಾನ್ ಬೆಂಬಲಿಸುವ ಎಲ್ಲಾ ಬರಹಗಳ ಮೇಲೆ ನಿಷೇಧ ಹೇರಿದೆ. ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿರುವುದಾಗಿ ಫೇಸ್‌ ಬುಕ್ ಹೇಳಿದೆ.

- Advertisement -

ಬಂಡುಕೋರರ ಗುಂಪಿಗೆ ಸಂಬಂಧಿಸಿದ ಬರಹಗಳ ಬಗ್ಗೆ ಮೇಲ್ವಿಚಾರಣೆ ಮಾಡಲು ಮತ್ತು ಅವುಗಳನ್ನು ತೆಗೆದುಹಾಕಲು ಅಫ್ಘಾನಿಸ್ತಾನಕ್ಕೆ ಮೀಸಲಾದ ತಜ್ಞರ ತಂಡವನ್ನು ಹೊಂದಿದ್ದೇವೆ ಎಂದು ಕಂಪನಿ ಹೇಳಿದೆ.

ಹಲವು ವರ್ಷಗಳಿಂದ, ತಾಲಿಬಾನ್ ತನ್ನ ಸಂದೇಶಗಳನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದೆ. ಆದರೆ, ಇದೀಗ ಫೇಸ್‌ ಬುಕ್ ಎಚ್ಚೆತ್ತುಕೊಂಡಿದೆ.

- Advertisement -

‘ತಾಲಿಬಾನ್ ಅನ್ನು ಅಮೆರಿಕದ ಕಾನೂನಿನ ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ನಿರ್ಧರಿಸಲಾಗಿದೆ. ನಮ್ಮ ಅಪಾಯಕಾರಿ ಸಂಘಟನೆಯ ನೀತಿಗಳ ಅಡಿಯಲ್ಲಿ ನಾವು ಅವರನ್ನು ನಮ್ಮ ಸೇವೆಗಳಿಂದ ನಿಷೇಧಿಸಿದ್ದೇವೆ. ಇದರರ್ಥ, ನಾವು ತಾಲಿಬಾನ್ ಅಥವಾ ಅವರ ಪರವಾಗಿ ನಿರ್ವಹಿಸುವ ಖಾತೆಗಳನ್ನು ತೆಗೆದುಹಾಕುತ್ತೇವೆ. ಅವರ ಪ್ರಶಂಸೆ, ಬೆಂಬಲ ಮತ್ತು ಪ್ರಾತಿನಿಧ್ಯವನ್ನು ನಿಷೇಧಿಸುತ್ತೇವೆ’ಎಂದು ಫೇಸ್‌ ಬುಕ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.



Join Whatsapp