ಒಂದು ಕೊರೋನ ಕೇಸ್ ಪತ್ತೆಯಾಗಿದ್ದಕ್ಕೆ ಲಾಕ್ ಡೌನ್ ಜಾರಿ ಮಾಡಿದ ನ್ಯೂಜಿಲ್ಯಾಂಡ್

Prasthutha|

ನ್ಯೂಜಿಲ್ಯಾಂಡ್: ಕಳೆದ ಆರು ತಿಂಗಳುಗಳಿಂದ ಶೂನ್ಯ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದ ನ್ಯೂಜಿಲ್ಯಾಂಡ್​ ನಲ್ಲಿ ಇದೀಗ ಒಂದು ಪ್ರಕರಣ ಪತ್ತೆಯಾಗಿದೆ. ತಕ್ಷಣವೇ ಮೂರು ದಿನಗಳ ಕಾಲ ಲಾಕ್ ​ಡೌನ್​ ಹೇರಿ ಸರ್ಕಾರ ಆದೇಶ ಮಾಡಿವೆ.

- Advertisement -

ಪತ್ತೆಯಾಗಿರುವ ಕೇಸ್​ ಡೆಲ್ಟಾ ರೂಪಾಂತರಿ ಎಂದು ಶಂಕಿಸಲಾಗಿದೆ. ಇದು ‘ಗೇಮ್ ಚೇಂಜರ್’ ಆಗಲು ನಾವು ಅವಕಾಶ ಮಾಡಿ ಕೊಡುವುದಿಲ್ಲ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ.

ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಥವಾ ಆರಂಭದಲ್ಲೇ ಸೋಂಕು ಹರಡುವುದನ್ನು ವಿಫಲವಾದರೆ ಏನಾಗಬಹುದು ಎಂಬುದನ್ನು ನಾವು ನೋಡಿದ್ದೇವೆ ಎಂದು ಮೂರನೇ ಕೊರೊನಾ ಅಲೆಗೆ ಸಾಕ್ಷಿಯಾಗಿರುವ ಆಸ್ಟ್ರೇಲಿಯಾವನ್ನು ಉದಾಹರಣೆ ನೀಡಿ ಅರ್ಡೆರ್ನ್ ಹೇಳಿಕೆ ನೀಡಿದ್ದಾರೆ. ಮಂಗಳವಾರ ರಾತ್ರಿಯಿಂದ ನ್ಯೂಜಿಲ್ಯಾಂಡ್​ ನಲ್ಲಿ ಮೂರು ದಿನಗಳ ಕಾಲ ಲಾಕ್‌ ಡೌನ್‌ ಹೇರಲಾಗಿದ್ದು, ವಿಸ್ತರಣೆ ಆಗುವ ಸಾಧ್ಯತೆಯಿದೆ.

- Advertisement -

ಈವರೆಗೆ ನ್ಯೂಜಿಲ್ಯಾಂಡ್​ ನಲ್ಲಿ  ಕೇವಲ ಶೇ.20ರಷ್ಟು ಜನರು ಮಾತ್ರ ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದಾರೆ.ಆದರೂ ಅಲ್ಲಿ ಈವರೆಗೆ ಪತ್ತೆಯಾಗಿದ್ದು 2,926 ಮಂದಿ ಸೋಂಕಿತರು ಹಾಗೂ ಮೃತಪಟ್ಟಿದ್ದು 27 ಮಂದಿ ಎಂದು ಹೇಳಲಾಗಿದೆ.

Join Whatsapp