ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಪರಿಸರದಲ್ಲಿ ಸ್ಪೋಟಕ ಸಾಮಾಗ್ರಿಗಳು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಕೆಲ ಸಮಯ ಆತಂಕದ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು ರನ್ ವೇ ಸ್ಥಳದ ಹತ್ತಿರ ಮಿನಿ ಸರಕು ಸಾಗಣೆಯ ಎರಡು ವಾಹಗಳಲ್ಲಿ ಇದ್ದ 904ಕೆ ಜಿ ಜಿಲೆಟಿನ್ ಕಡ್ಡಿ ಹಾಗೂ 3267 ಡಿಟೋನೇಟರ್ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ವಿಮಾನ ನಿಲ್ದಾಣದ ಕಾಮಗಾರಿಗೆ ಬಂಡೆ ಸ್ಪೋಟಿಸಿ ಅಲ್ಲಿಂದಲೇ ಜೆಲ್ಲಿ ಬಳಕೆ ಮಾಡಲು ಜಿಲ್ಲಾಧಿಕಾರಿ ಅನುಮತಿಸಿದ್ದರು. ಸ್ಪೋಟಕ ಪೂರೈಕೆಯ ಕಂಪನಿಗಳು ಸೋಮವಾರ ಸ್ಪೋಟಕಗಳು ಕಳುಹಿಸಿಕೊಟ್ಟಿದ್ದರೂ ಸ್ಪೋಟಕ ಪರಿಣಿತರು ಬಾರದ ಕಾರಣದಿಂದ ವಾಹನಗಳನ್ನು ರನ್ ವೇ ಹತ್ತಿರದಲ್ಲೇ ಬಿಟ್ಟು ತೆರಳಿದ್ದರು ಎನ್ನಲಾಗಿದೆ.
ನಿರ್ಲಕ್ಷ್ಯ ತೋರಿದ ಮಾಲಿಕ ವಿರುದ್ಧ ಕಠಿಣ ಕ್ರಮಗಳು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.