ರಾಜ್ಯದಲ್ಲಿ ಮಾರ್ಚ್ 16ರಿಂದ ಬಸ್ ಸೇವೆ ಸ್ತಬ್ದ?

Prasthutha|

6ನೇ ವೇತನ ಆಯೋಗ ಬಜೆಟ್ ನಲ್ಲಿ ಮಂಡನೆ ಆಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾರ್ಚ್ 16ರಿಂದ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.

- Advertisement -

ಈ ಹಿಂದೆ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆಯ ಸಂದರ್ಭದಲ್ಲಿ ಸರಕಾರಕ್ಕೆ ಮಾರ್ಚ್ 15ರ ಗಡುವು ನೀಡಲಾಗಿತ್ತು. 15 ರೊಳಗೆ 9 ಬೇಡಿಕೆಯನ್ನು ಈಡೇರಿಸದಿದ್ದರೆ ಸಾರಿಗೆ ನೌಕರರು ಮತ್ತೊಮ್ಮೆ ಬೀದಿಗಿಳಿಯಲಿದ್ದಾರೆ.

ಡಿಸೆಂಬರ್ ನಲ್ಲೂ ನಾಲ್ಕು ದಿನ‌ ಮುಷ್ಕರ ನಡೆದಿತ್ತು. ಇದೀಗ ಮಾರ್ಚ್ 16 ರಿಂದ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ ಎನ್ನಲಾಗಿದೆ.

Join Whatsapp