ಫೆಬ್ರವರಿ ವೇಳೆ ಕೋವಿಡ್ ಮೂರನೇ ಅಲೆ ಸೃಷ್ಟಿ | ತಜ್ಞರ ಎಚ್ಚರಿಕೆ

Prasthutha|

ನವದೆಹಲಿ : ಫೆಬ್ರವರಿಯ ವೇಳೆ ಕೊರೊನಾ ರೂಪಾಂತರಿ ಓಮಿಕ್ರಾನ್‌ನಿಂದಾಗಿ ಕೋವಿಡ್ ಮೂರನೇ ಅಲೆ ಸೃಷ್ಟಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೊಸ ರೂಪಾಂತರಿ ಓಮಿಕ್ರಾನ್‌ನೊಂದಿಗೆ, ಕೊರೋನಾ ವೈರಸ್‌ನ ಮೂರನೇ ಅಲೆ ಫೆಬ್ರವರಿ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು ಮತ್ತು ದೇಶದಲ್ಲಿ ದಿನಕ್ಕೆ 1 ರಿಂದ 1.5 ಲಕ್ಷ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಇದು ಎರಡನೆ ಅಲೆಯಷ್ಟು ಭೀಕರವಾಗಿರುವುದಿಲ್ಲ, ಸೌಮ್ಯವಾಗಿರುತ್ತದೆ ಎಂದು ಹೇಳಿದ್ದಾರೆ.

- Advertisement -

ದಕ್ಷಿಣ ಆಫ್ರಿಕಾದಲ್ಲಿ ಈ ರೂಪಾಂತರದ ಅನೇಕ ಪ್ರಕರಣಗಳು ದಾಖಲಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ, ಹೊಸ ರೂಪಾಂತರದೊಂದಿಗೆ ಫೆಬ್ರವರಿ ವೇಳೆಗೆ ದೇಶದಲ್ಲಿ ಕೋವಿಡ್ ಮೂರನೇ ಅಲೆಯನ್ನು ನಿರೀಕ್ಷಿಸಿದ್ದೇವೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ. ಡೆಲ್ಟಾ ತೀವ್ರತೆಯು ಓಮಿಕ್ರಾನ್‌ನ ರೂಪಾಂತರಿಯಲ್ಲಿ ಕಂಡುಬರುತ್ತಿಲ್ಲ ಎಂದು ಐಐಟಿ ವಿಜ್ಞಾನಿ ಮನೀಂದ್ರ ಅಗರ್ವಾಲ್ ತಿಳಿಸಿದ್ದಾರೆ.

ಈ ರೂಪಾಂತರವು ಅತ್ಯಂತ ಶಕ್ತಿಯುತವಾದ ರೋಗನಿರೋಧಕ ಶಕ್ತಿ ಹೊಂದಿದೆ ಎಂದೂ CSIR ಇನ್‌ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿಯ ನಿರ್ದೇಶಕ ಅನುರಾಗ್ ಅಗರ್‌ವಾಲ್ ಎಚ್ಚರಿಸಿದ್ದಾರೆ. ಲಸಿಕೆಯ ವೇಗ ಮತ್ತು ಡೆಲ್ಟಾ ರೂಪಾಂತರಕ್ಕೆ ಹೆಚ್ಚಿನ ಮಾನ್ಯತೆ ನೀಡಿದರೆ, ರೋಗದ ತೀವ್ರತೆಯು ಕಡಿಮೆ ಇರಲಿದೆ ಎಂದು ತಿಳಿಸಿದ್ದಾರೆ.

Join Whatsapp